ISSN (Print) - 0012-9976 | ISSN (Online) - 2349-8846

ದೆಹಲಿ ಚುನಾವಣೆ ಸ್ಥಳೀಯತೆ ಮತ್ತು ಸಾರ್ವತ್ರಿಕತೆ

ರಾಜಕೀಯದಲ್ಲಿ ದ್ವಂದ್ವವೆಂಬುದು ನೈತಿಕವಾಗಿ ಆರೋಗ್ಯಕರವಾದ ಸಮಾಜದ ಸೃಷ್ಟಿಗೆ ಅಗತ್ಯವಾದ ಪರಿಸ್ಥಿತಿಯೇ ಹೊರತು ಸ್ವಯಂಪೂರ್‍ಣ ಸನ್ನಿವೇಶವಲ್ಲ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ (ಆಪ್)ದ ಗೆಲುವನ್ನು ವಿವಿಧ ವಿಶ್ಲೇಷಕರು ವಿವಿಧ ಬಗೆಗಳಲ್ಲಿ ವಿಶ್ಲೇಷಿಸುತ್ತಿದ್ದಾರೆ. ಉದಾಹರಣೆಗೆ ತಮ್ಮನ್ನು ಕ್ರಾಂತಿಕಾರಿ ಸೆಕ್ಯುಲಾರ್ ಎಂದು ಪರಿಗಣಿಸಿಕೊಳ್ಳುವವರು ಆಪ್ ನ ವಿಜಯದ ಬಗ್ಗೆ ಬಲವಾದ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಆಪ್ ಬೆಂಬಲಿಗರಲ್ಲಿ ರಾಜಕೀಯ ಕಸಿವಿಸಿಯನ್ನು ಹುಟ್ಟುಹಾPದೆ. ಸೆಕ್ಯುಲಾರಿಸಂಗೆ ಸಂಬಂಧಪಟ್ಟ ಹಲವಾರು ವಿಷಯಗಳ ಬಗ್ಗೆ ಆಪ್ ನ ನಿಲುವುಗಳೇ ಈ ಕ್ರಾಂvಕಾರಿ ಸೆಕ್ಯುಲಾರ್‌ಗಳು ವ್ಯಕ್ತಪಡಿಸುತ್ತಿರುವ ಸಂದೇಹಕ್ಕೆ ಆಧಾರ. ಶಹೀನ್‌ಭಾಗ್ ವಿಷಯದಲ್ಲಿ ಆಪ್ ಪಕ್ಷವು ಸ್ಪಷ್ಟ ನಿಲುವು ತೆಗೆದುಕೊಳ್ಳzರುವುದನ್ನು ಆ ವಿಶ್ಲೇಷಕರು ಉದಾಹರಣೆಯಾಗಿ ನೀಡುತ್ತಾರೆ. ಹೀಗಾಗಿ ರಾಜಕೀಯ ಪಕ್ಷಗಳು ಒಂದು ಸುಸ್ಪಷ್ಟವಾದ ರಾಜಕೀಯವನ್ನು ಅನುಸರಿಸುವ ಅಗತ್ಯವಿದೆಯೆಂದು ಅವರು ಪ್ರತಿಪಾದಿಸುತ್ತಾರೆ.

ಈ ಲುವಿಗೆ ಪೂರಕವಾಗಿ ಆಪ್ ಪಕ್ಷವು ಚುನಾವಣಾ ಪ್ರಚಾರಗಳಿಂದ ಧಾರ್ಮಿಕ ವಿಷಯಗಳನ್ನು ಹೊರಗಿಡುವ ಬಗ್ಗೆ ಅಥವಾ ಸೆಕ್ಯುಲಾರ್ ವಿಷಯಗ ಬಗ್ಗೆ ಹೆಚ್ಚಾಗಿ ಮತ್ತು ಗಟ್ಟಿಯಾಗಿ ಮಾತನಾಡದಿರುವ ತಂತ್ರವನ್ನು ಅನುಸರಿಸುತ್ತಿರುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ ಭಾಷೆಯನೇ ಬಳಸಿ ಅದನ್ನು ಬಲಹೀನಗೊಳಿಸುವ ಆಪ್‌ನ ರಣತಂತ್ರದಲ್ಲಿರುವ ಅಪಾಯದ ಬಗ್ಗೆ ಕ್ರಾಂತಿಕಾರಿ ಸೆಕ್ಯ್ಲಾರ್‌ಗಳು ಗಮನವನ್ನು ಸೆಳೆಯುತ್ತಾರೆ. ತನ್ನ ವಿರೋಧಿಗಳು ಬಳಸುತ್ತಿದ್ದ ಭಾಷೆಯ ಮಹತ್ವವನ್ನು ಬಲಹೀನಗೊಳಿಸಲು ಆಪ್ ಪಕ್ಷವು ತಂತ್ರವನ್ನು ಮಾಡಿದ್ದು ನಿಜ. ಈ ತಂತ್ರದಲ್ಲಿ ಆಪ್ ಪಕ್ಷವೂ ಯಶಸ್ವಿಯೂ ಆಗಬಹುದು. ಆದರೆ ಅಂತಿಮವಾಗಿ ತನ್ನ ತಂತ್ರಕ್ಕೇ ತಾನೇ ಬಲಿಯೂ ಆಗಬಹುದು. ಕೆಲವು ಸೆಕ್ಯುಲಾರ್‌ವಾದಿಗಳು ಇದು ಆಪ್ ಪಕ್ಷವು ಮೃದು ಹಿಂದೂತ್ವದ ಕಡೇ ಮುಖಮಾಡಿರುವ ಸೂಚನೆಯೆಂದೂ ಬಣ್ಣಿಸುತ್ತಿದ್ದಾರೆ. ತನ್ನ ಪ್ರಚಾರಗಳಲ್ಲಿ ಹಿಂದೂ ಸಂಕೇತಗಳನ್ನು ಬಳಸಿದ ಆಪ್ ಪಕ್ಷದ ರಣತಂತ್ರದಲ್ಲಿ ಆ ಪಕ್ಷದ ನಾಯಕರ ಆತಂಕವೇ ಎದ್ದುಕಾಣುತ್ತದೆ. ಭಾರತದ ಮತದಾರರ ಒಂದು ವಿಭಾಗ ಈಗಲೂ ಕೋಮುವಾದಿ ಧ್ರುವೀಕರಣದ ಚುನಾವಣಾ ಪ್ರಚಾರಗಗೆ ಪಕ್ಕಾಗುತ್ತಾರೆಂದು ಆಪ್ ಪಕ್ಷವು ಭಾವಿಸಿತ್ತು. ಈ ಚುನಾವಣೆಯಲ್ಲಿ ಜೆ ತನ್ನ ಮತಬೆಂಬಲವನ್ನು ಹೆಚ್ಚಿಸಿಕೊಂಡಿರುವುದೂ ಸಹ ಅವರ ಆತಂಕಕ್ಕೆ ಆಧಾರವಿದೆಯೆಂದು ಹೇಳುತ್ತದೆ. ಆದರೆ ಬಹುಸಂಖ್ಯಾತ  ಮತದಾರರು ಆಪ್ ಪಕ್ಷವನ್ನು ಬೆಂಬಲಿಸಿರುವುದಕ್ಕೆ ಅದಕ್ಕೆ ಸಿಕ್ಕಿರುವ ಸೀಟುಗಳೇ ಸಾಕ್ಷಿ.  ಆಪ್‌ನ ವಿಜಯದಿಂದಾಗಿ ಕೆಲವು ಸಕಾರಾತ್ಮಕ ಬೆಳವಣಿಗೆಗಳೂ ಆಗಿವೆ. ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ  ಬಿಜೆಪಿಯ ಕೆಲವು ನಾಯಕರು ತಾವು ಪ್ರಚೋದನಕಾರಿ ಭಾಷೆಯನ್ನೂ ಬಳಸಬಾರದಿತ್ತೆಂದೂ ಅದರಲ್ಲೂ ಆಪ್ ನಾಯಕರನ್ನು ಭಯೋತ್ಪಾದಕರೆಂದು ಬಣ್ಣಿಸುವ ಅಥವಾ ಗೋಲಿ ಮಾರೋ ತರಹದ ಭಾಷೆಯನ್ನು ಬಳಸಬಾರದಿತ್ತೆಂದು ಹೇಳಿಕೆಯನ್ನು ನೀಡಿದ್ದಾರೆ. ಮತ್ತೊಂದು ಕಡೆ ಆಪ್ ನ ಸ್ವನಿಯಂತ್ರಿತ ಹಾಗೂ ಏಕಗಮನದ ಪ್ರಚಾರಗಳು ಅದಕ್ಕೆ ಚುನಾವಣಾತ್ಮಕ ಫಲನೀಡಿದೆ. ಆಪ್ ನ ವ್ಯೂಹಾತ್ಮಕ ಪ್ರಚಾರ ಮತ್ತದರ ಪರಿಣಾಮವಾಗಿ ಅದಕ್ಕೆ ದಕ್ಕಿದ ವಿಜಯವು, ಕೆಲವೊಮ್ಮೆ ಪ್ರಚೋದನಾತ್ಮಕ ಪ್ರಚಾರಗಳು ತಮಗೆ ವಿರುದ್ಧವಾದ ಪರಿಣಾಮವನ್ನು ಉಂಟುಮಾಡಬಹುದೆಂಬ ಅರಿವನ್ನು ಬಿಜೆಪಿ ನಾಯಕರಲ್ಲಿ ತಾತ್ಕಾಲಿಕವಾಗಿಯಾದರೂ ಮೂಡಿಸಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯು ಈ ಬಗ್ಗೆ ಜಾಗರೂಕವಾಗಿರುತ್ತದೆಂದು ಇದರ ಅರ್ಥವೇ? ಈ ಸದ್ಯಕ್ಕೆ ಬಿಜೆಪಿಯನ್ನು ಬಿಟ್ಟು ಬೇರೆಯಾರೂ ಇದಕ್ಕೆ ಉತ್ತರ ನೀಡಲಾರರು.

ಆಪ್ ನ ನಾಯಕರು ಈಬಗ್ಗೆ ಸ್ಪಷ್ಟವಾದ ಹೇಳಿಕೆಯನ್ನೇನೂ ನೀಡಲಿಲ್ಲವಾದರೂ ಅಭಿವೃದ್ಧಿ ಪ್ರಣಾಳಿಯq ತಮ್ಮ ಚುನಾವಣಾ ಬೆಂಬಲವನ್ನು ಸಧೃಡೀಕರಿಸಿಕೊಳ್ಳಲು ಒಂದು ಅಸ್ಪಷ್ಟ ಅಥವಾ ದ್ವಂದ್ವ ಧೋರಣೆಯನ್ನೇ ಅನುಸರಿಸಿದರು. ಇದಕ್ಕೆ ಒಂದು ವ್ಯೂಹತಾಂತ್ರಿಕ ಮಹತ್ವ ಇತ್ತೆನ್ನುವುದು ನಿಜವಾದರೂ ಅಂತಹ ನಿಲುವುಗಳು ಆಪ್ ಪಕ್ಷವು ಒಂದು ಧರ್ಮಕ್ಕಿಂತ ಮತ್ತೊಂದು ಧರ್ಮದ  ಸಂಕೇತಗಳನ್ನು ಬಳಸಿದ ನಡೆಯನ್ನು ಮರೆಮಾಚುತ್ತವೆ. ಆಪ್ ನ ಚುನಾವಣಾ ಪ್ರಚಾರ ತಂತ್ರದಲ್ಲಿ ಒಂದು ಪ್ರಜ್ನಾಪೂರ್ವಕ ತತ್ವರಹಿತ ಪ್ರಯೋಜನಾವಾದವು ಎದ್ದುಕಾಣುತ್ತದೆ. ಒಟ್ಟಾರೆಯಾಗಿ ನೋಡುವುದಾದರೆ ಆಪ್ ನ ನಾಯಕರು ಬಿಜೆಪಿಯ ಪದಶೂರತ್ವದ ಯುದ್ಧದಲ್ಲಿ ಪಾಲ್ಗೊಳ್ಳಲು ನಿರಾಕರಿಸಿ ಹಿಂದೂತ್ವದ ಶಬ್ದಾಡಂಬರಗಳು ಹೆಚ್ಚು ಪರಿಣಾಮಕಾರಿಯಾಗದಂತೆ ಮಾಡಿದರು.

ಅಂತಿಮವಾಗಿ ಒಂದು ವಿಶ್ಲೇಷಣಾ ನೆಲೆಯಲ್ಲಿ ಕೆಲವರು ಆಪ್‌ನ ಚುನಾವಣಾ ರಾಜಕಾರಣವನ್ನು ಸ್ಥಳೀಯ ಸಂಗತಿಗಳಿಗೆ ಪರಿಮಿತಗೊಳಿಸುವ ಮೂಲಕ ಅದೊಂದು ಅಖಿಲ ಭಾರತ ಪಕ್ಷವಾಗುವುದು ಅಸಾಧ್ಯವೆಂದು ಪ್ರತಿಪಾದಿಸುತ್ತಿದ್ದಾರೆ. ಆಪ್ ನ ವಿಜಯವನ್ನು ಪ್ರಾಥಮಿಕವಾಗಿ ಅದರ ಸ್ಥಳೀಯ ಮಹತ್ವದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕೇ ವಿನಾ ಅದರ ರಾಷ್ಟ್ರೀಯ ಪರಿಣಾಮಗಳ ನೆಲೆಯಲ್ಲಲ್ಲ ಎಂದು ಕೆಲವರು ವಾzಸುತ್ತಾರೆ. ಆಪ್ ಅನ್ನು ಒಳಗೊಂಡಂತೆ ಯಾವುದೇ ಪಕ್ಷದ ಪ್ರಭಾವವನ್ನು ಸೀಮಿತಗೊಳಿಸಿ ಅರ್ಥಾಮಾಡಿಕೊಂಡಾಗ ಕೆಲವು ಮಹತ್ವದ ವಿಷಯಗಳು ಬಿಟ್ಟುಹೋಗುತ್ತವೆ.  ದೆಹಲಿಯ ೭೦ ಸೀಟುಗಳಲ್ಲಿ ೬೨ನ್ನು ಗೆಲ್ಲುವ ಮೂಲಕ ಆಪ್ ಪಕ್ಷವು ಬಿಜೆಪಿಯನ್ನು ಬಗ್ಗುಬಡಿದಿದ್ದು ಮಾತ್ರವಲ್ಲದೆ ಅದರ ರಾಜಕೀಯ ವಿಶ್ವಾಸವನೂ ಉಡುಗಿಸಿದೆ; ಅದಕಿಂತಲೂ ಮುಖ್ಯವಾಗಿ ಕೋಮುವಾದಿ ಧೃವೀಕರಣದ ಮೂಲಕ ಭಾರತವನ್ನು ಹಿಂದುವೀಕರಣಗೊಳಿಸಬೇಕೆಂಬ ಬಿಜೆಪಿಯ ರಾಷ್ಟ್ರವ್ಯಾಪಿ ಯೋಜನೆಯ ಭಾಗವಾಗಿದ್ದ ಬಿಜೆಪಿಯ ಪ್ರಚಾರವನ್ನು ಅದು ಮೂಲೆಗುಂಪು ಮಾಡಿದೆ.

ಇದರಲ್ಲಿ ಭಾರತವನ್ನು ಸಂಕುಚಿತಗೊಳಿಸಬೇಕೆಂಬ ದೇಶವ್ಯಾಪಿ ಯೋಜನೆಯೊಂದನ್ನು ಸಾಕಾರಗೊಳಿಸಿಕೊಳ್ಳುವ ಭಾಗವಾಗಿ ನಿಯೋಜಿಸಲಾದ ಶಕ್ತಿಯನ್ನು ಸ್ಥಳೀಯ ಶಕ್ತಿಯು ತಟಸ್ಥಗೊಳಿಸಿದ್ದು ನಾವು ಅರ್ಥಮಾಡಿಕೊಳ್ಳಬೇಕಾದ ಬಹುಮುಖ್ಯವಾದ ಸಂಗತಿಯಾಗಿದೆ. ಸ್ಥಳಿಯ ಬೇರುಗಳನ್ನು ಹೊಂದಿರುವ ಸತ್ಯಗಳು ಮಾತ್ರ ಬಲಪಂಥೀಯ ಪಕ್ಷಗಳು ಹರಿಬಿಟ್ಟ ಸುಳ್ಳಿನ ಪ್ರಚಾರವನ್ನು ಸೋಲಿಸಬಲ್ಲವೆಂಬುದನ್ನು ಆಪ್ ನ ವಿಜಯವು ತೋರಿಸಿಕೊಟ್ಟಿದೆ. ಹೀಗಾಗಿ ಆಪ್ ವಿದ್ಯಮಾನವನ್ನು ಸ್ಥಳಿಯ ಅಥವಾ ಪ್ರಾಂತ್ಯ  ಮಟ್ಟಕ್ಕೆ ಮಾತ್ರ ಸೀಮಿತಗೊಳಿಸುವುದು ಮೇಲ್‌ಸ್ಥರದ ತಿಳವಳಿಕೆ ಮಾತ್ರ ಆಗಿಬಿಡುತ್ತದೆ.

ಅದೇನೇ ಇದ್ದರೂ ಸೈದ್ಧಾಂತಿಕತೆಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಆಪ್ ಪಕ್ಷವು ದ್ವಂದ್ವದ ಚೌಕಟ್ಟನ್ನು ಅತಿಯಾಗಿ ಬಳಸಬಾರದಷ್ಟೆ. ಆಪ್ ಪಕ್ಷವು ಪರಿವರ್ತನಾಶೀಲ ಸತ್ಯಗಳ ಸಾಮೀಪ್ಯವನ್ನು ಕಡಿದುಕೊಳ್ಳಬಾರದು; ಅಭಿವೃದ್ಧಿಯ ಫಲಗಳಿಂದ ತನ್ನ ಜನರಿಗೆ ಬದುಕನ್ನು ಖಾತರಿಗೊಳಿಸುವ ಸತ್ಯಗಳಿಂದ ಮಾತ್ರವಲ್ಲದೆ ಜನರ ನಡುವೆ ಶಾಂತಿಯನ್ನು ನೆಲೆಯೂರಿಸುವ ಸತ್ಯಗಳನ್ನುಲಾದು ಒಳಗೊಳ್ಳಬೇಕಾಗುತ್ತದೆ. ಈ ವಿಷಯಗಳು ದೆಹಲಿಯ ಜನರಿಗೆ ಮಾತ್ರ ಸೀಮಿತವಾದುದೇನಲ್ಲ; ವಾಸ್ತವವಾಗಿ ಅವು ಸೆಕ್ಯುಲಾರಿಸಂ ಮತ್ತು ವಿಶ್ವಾತ್ಮಕತೆಯ ಮೌಲ್ಯಗಳ ಮೇಲೆ ಪ್ರಭಾವ ಬೀರುವಂತವಾಗಿದೆ. ಸ್ಥಳೀಯ ಚುನಾವಣಾ ಪರಿಧಿಯು ವಿಶ್ವಾತ್ಮಕ ತತ್ವವನ್ನು ಒಳಗೊಂಡು ಕೋಮುವಾದಿ ಸಿದ್ಧಾಂತವನ್ನು ಹೊರಗಟ್ಟಿದೆ.

Back to Top