ಕಟೆಕಟೆಯಲ್ಲಿ ಉತ್ತರಪ್ರದೇಶದ ಆಡಳಿತ

ಪೊಲೀಸರ ಆಕ್ರಮಣಕಾರಿ ಮತ್ತು ಭಯೋತ್ಪಾದಕ ಧೋರಣೆಗಳು ಒಂದು ಸಭ್ಯ ಸಮಾಜಕ್ಕೆ ಹಾಗೂ ಪ್ರಜಾತಾಂತ್ರಿಕ ವ್ಯವಸ್ಥೆಗೆ ತಕ್ಕುದಾದುದಲ್ಲ.

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕತ್ವ ನೋಂದಣಿ (ಎನ್‌ಆರ್‌ಸಿ)ಗಳ ವಿರುದ್ಧದ ಹೋರಾಟಗಳು ಅಚಲವಾಗಿ ಮುಂದುವರೆಯುತ್ತಿರುವಂತೆ ಬಿಜೆಪಿಯು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಥವಾ ಬಿಜೆಪಿ ನೇತೃತ್ವದ ಸರ್ಕಾರಗಳಿರುವ ರಾಜ್ಯಗಳಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಅತ್ಯಂತ ದಮನಕಾರಿ ಮತ್ತು ಹಿಂಸಾತ್ಮಕ ಧೋರಣೆಗಳನ್ನು ಅನುಸರಿಸುತ್ತಿದ್ದಾರೆ. ಪೊಲೀಸ್ ಫೈರಿಂಗ್ ಕಾರಣದಿಂದಾಗಿ ಹಲವರ ಪ್ರಾಣ ತೆಗೆದ ಪ್ರಕರಣಗಳೂ ವರದಿಯಾUರುವುದು ಇದೇ ರಾಜ್ಯಗಳಿಂದ ಎಂಬುದು ಆಳುವ ಸರ್ಕಾರಕ್ಕೆ ನಾಚಿಕೆ ತರಬೇಕು. ಆದರೆ ಈ ಬಗ್ಗೆ ಯಾವುದೇ ಪಶ್ಚಾತ್ತಾಪ ತೋರದ ಆಳುವ ಪಕ್ಷ  ಮತ್ತವರ ಬೆಂಬಲಿಗರು ಇದನ್ನೇ ಒಂದು ಬಲಿಷ್ಟ ನಾಯಕತ್ವದ ಪುರಾವೆ ಎಂಬಂತೆ ಕೊಚ್ಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಂತೂ ೨೦೧೯ರ ಡಿಸೆಂಬರ್ ೧೯ರ ಪ್ರತಿಭಟನಾಕಾರರ ವಿರುದ್ಧ  ಸೇಡು ತೀರಿಸಿಕೊಳ್ಳುವುದಾಗಿ ಅತ್ಯಂತ ಹೀನಾಯವಾಗಿ ಬಹಿರಂಗವಾಗಿಯೇ ಘೋಷಿಸಿದ್ದರು. ಆಗಿನಿಂದಲೂ ಆ ರಾಜ್ಯದಲ್ಲಿ ಪ್ರತಿಭಟನಾಕಾರರು ಪೊಲೀಸ್ ಕ್ರೌರ್ಯಗಳನ್ನೂ, ಬೇಕಾಬಿಟ್ಟಿ ಬಂಧನಗಳನ್ನು ಹೆಚ್ಚೆಚ್ಚು ಅನುಭವಿಸುತ್ತಿದ್ದಾರೆ.

ಈವರೆಗೆ ಉತ್ತರ ಪ್ರದೇಶವೊಂದರಲ್ಲೇ ೧೯ ಜೀವಗಳು ಬಲಿಯಾಗಿದ್ದು ಸರ್ಕಾರವು ಅದರ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವುದಿರಲಿ, ಶಾಂತಿ-ಸಂಧಾನಗಳ ಕ್ರಮಗಳಿಗೂ ಸಹ ಮುಂದಾಗುತ್ತಿಲ್ಲ. ಮೊದಲಿಗೆ ಪೊಲೀಸರು ತಾವು ಗುಂಡನ್ನು ಹಾರಿಸಲೇ ಇಲ್ಲವೆಂದು ಹೇಳುತ್ತಾ ಅದನ್ನು ಪ್ರತಿಭಟನಾಕಾರರ ತಲೆಗೇ ಕಟ್ಟಲು ಹವಣಿಸಿದರು. ಆದರೆ ಪೊಲೀಸರ ಕೃತ್ಯಗಳನ್ನು ಬಯಲು ಮಾಡುವಂತಹ ವಿಡಿಯೋ ದೃಶ್ಯಾವಳಿಗಳು ಬಯಲಾಗುತ್ತಿದ್ದಂತೆ ಪೊಲೀಸರು ಒಪ್ಪಿಕೊಳ್ಳಲೇ ಬೇಕಾಯಿತಾದರೂ ಅದನ್ನು ಸ್ವರಕ್ಷಣಾ ಕ್ರಮವೆಂಬಂತೆ ಸಮರ್ಥಿಸಿಕೊಂಡರು. ಮನುಷ್ಯ ಜೀವಗಳು ಬಲಿಯಾಗುವುದು ಒಂದು ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರದ ವೈಫಲ್ಯವಾಗಿದೆ ಅಥವಾ ಒಂದು ಗಂಭೀರ ನೈತಿಕ ಬಿಕ್ಕಟ್ಟಾಗಿದೆ. ಆದ್ದರಿಂದ ಇದರ ಬಗ್ಗೆ ಸೂಕ್ತ ತನಿಖೆ ನಡೆದು ಆಕ್ರಮಣಕಾರರಿಗೆ ಶಿಕ್ಷೆಯಾಗುವುದು ಅತ್ಯಗತ್ಯವಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅದಕ್ಕೆ ತದ್ವಿರುದ್ಧವಾಗಿವೆ. ವಾಸ್ತವಿಕ ವರದಿಗಳು ಸ್ಪಷ್ಟಪಡಿಸುತ್ತಿರುವಂತೆ ಈ ದಾಳಿಗಳಲ್ಲಿ ಪೊಲೀಸರು ಮತ್ತು ಆಡಳಿತ ಯಂತ್ರಾಂಗವು ಕೈಗೂಡಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಹಾಗೂ ಅದೇ ಕಾರಣಕ್ಕಾಗಿಯೇ ಆಕ್ರಮಣಕಾರರನ್ನು ಸರ್ಕಾರವು ರಕ್ಷಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಉತ್ತರ ಪ್ರದೇಶ ಪೊಲೀಸರು ತಾವಿರುವುದು ನಾಗರಿಕ ಸೇವೆಯಲ್ಲೇ ವಿನಾ ಮಿಲಿಟರಿ ಸೇವೆಯಲ್ಲಲ್ಲ ಎಂಬ ಅತ್ಯಂತ ಪ್ರಾಥಮಿಕ ವಿಷಯವನ್ನೇ ಮರೆತುಹೋಗಿರುವಂತಿದೆ. ಉತ್ತರ ಪ್ರದೇಶವನ್ನು ಒಂದು ಗಲಭೆ ಪೀಡಿತ ಅಥವಾ ಸಂಘರ್ಷ ಸಿಕ್ತ ಪ್ರದೇಶವೆಂದು ಘೋಷಿತವಾಗಿಲ್ಲವಾದ್ದರಿಂದ ಪೊಲೀಸರು ಅನುಸರಿಸುತ್ತಿರುವ ಸೇನಾತ್ಮಕ ಧೋರಣೆಗೆ ಯಾವುದೆ ಸಮರ್ಥನೆಯಿಲ್ಲ. ಒಂದು ಸಭ್ಯ ಸಮಾಜದಲ್ಲಿ ಪೊಲೀಸರು ಪ್ರಚೋದಿಸಲ್ಪಟ್ಟರೂ ಅತಿ ಹೆಚ್ಚು ತಾಳ್ಮೆಯನ್ನು ತೋರಬೇಕಿರುತ್ತದೆ. ಆದರೆ ಉತ್ತರ ಪ್ರದೇಶ ಪೊಸರು ಕ್ಷುಲ್ಲಕವಾದ ಅಥವಾ ಪ್ರತಿಭಟನಾಕಾರರು ಹಿಂಸಾಚಾರದ ತೊಡಗುತ್ತಿದ್ದರು ಎಂಬ ಅನುಮಾನಾಸ್ಪದ  ಕಾರಣಗಳನ್ನು ಮುಂದಿಟ್ಟುಕೊಂಡು ಒಂದು ನಿರ್ದಿಷ್ಟ ಸಮುದಾಯವನ್ನೇ ದಾಳಿಗೆ ಗುರಿಯಾಗಿಸಿಕೊಂಡಿರುವುದು ಕಂಡುಬರುತ್ತದೆ. ಹೀಗಾಗಿ ಪೊಲೀಸರ ಈ ಸಮರ್ಥನೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಮುಸುಕುಧಾರಿ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲು ಒಂದು ನಿಷ್ಪಕ್ಷಪಾತ ತನಿಖೆ ನಡೆಯುವುದು ಅತ್ಯಗತ್ಯವಾಗಿದೆ.

To read the full text Login

Get instant access

New 3 Month Subscription
to Digital Archives at

₹826for India

$50for overseas users

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Using ordinance to protect freedom of expression from foul speech may result in damaging decent communication.

Only an empowered regulator can help boost production and cut coal imports.

Biden’s policy of the “return to the normal” would be inadequate to decisively defeat Trumpism.

*/ */

Only a generous award by the Fifteenth Finance Commission can restore fiscal balance.

*/ */

The assessment of the new military alliance should be informed by its implications for Indian armed forces.

The fiscal stimulus is too little to have any major impact on the economy.

The new alliance is reconfigured around the prospect of democratic politics, but its realisation may face challenges.

A damning critique does not allow India to remain self-complacent on the economic and health fronts.

 

The dignity of public institutions depends on the practice of constitutional ideals.

The NDA government’s record in controlling hunger is dismal despite rising stocks of cereal.

 

Back to Top