ISSN (Print) - 0012-9976 | ISSN (Online) - 2349-8846

ಜಿಎಸ್‌ಟಿ ಪರಿಹಾರ ಪಾವತಿಯಲ್ಲಿನ ಬಿಕ್ಕಟ್ಟು

ಒಂದು ಮಂದಗತಿಯಲ್ಲಿರುವ ಆರ್ಥಿಕತೆಯಲ್ಲಿ ಕಿರಿದಾಗುತ್ತಿರುವ ವಿತ್ತೀಯ ಅವಕಾಶವೇ ಜಿಎಸ್‌ಟಿ ಆದಾಂi ಪರಿಹಾರ ಪಾವತಿಯು ಎದುರಿಸುತ್ತಿರುವ ಹೊಸ ಆಪತ್ತಾಗಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಯಾವುದೇ ತೆರಿಗೆ ಸುಧಾರಣಾ ಕ್ರಮಗಳೊಂದಿಗೆ ಬೆಸೆದುಕೊಂಡಿರುವ ಆದಾಯ ಗಳಿಕೆಯಲ್ಲಿನ ಅನಿಶ್ಚತೆಗಳು ಎಲ್ಲಾ ಸರ್ಕಾರಗಳಿಗೂ ಕಳವಳನ್ನುಂಟು ಮಾಡುತ್ತವೆ. ಹೀಗಾಗಿ ತೆರಿಗೆ ಸುಧಾರಣೆಯ ಬಗ್ಗೆ ವಿಶಾಲ ನೆಲೆಯ ಸರ್ವ ಸಮ್ಮತಿಯನ್ನು ರೂಢಿಸಬೇಕೆಂದರೆ ಯಾವುದಾದರೊಂದು ಬಗೆಯ ಆದಾಯ ರಕ್ಷಣೆಯ ಭರವಸೆಯ ಅಗತ್ಯವಿದ್ದೇ ಇರುತ್ತದೆ. ಹಾಗಾಗಿಯೇ, ೨೦೧೭ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) (ರಾಜ್ಯಗಗೆ ಪರಿಹಾರ) ಕಾಯಿದೆಯಲ್ಲಿ ಜಿಎಸ್‌ಟಿ ಜಾರಿಯಾದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳ ಜಿಎಸ್‌ಟಿ(ಎಸ್‌ಜಿಎಸ್‌ಟಿ) ಮತ್ತು ಅಂತರರಾಜ್ಯ ಜಿಎಸ್‌ಟಿ ಗಳಿಕೆಯಲ್ಲಿ ಕೊರತೆ ಕಂಡು ಬಂದರೆ ಅವುಗಳ ರಾಜಸ್ವ ಆದಾಯ ರಕ್ಷಣೆಯ ಭರವಸೆಯನ್ನು ನೀಡುವ  ಅವಕಾಶವನ್ನು ಕಲ್ಪಿಸಿತ್ತು. ಮೇಲಾಗಿ ಈ ಆದಾಯ ರಕ್ಷಣೆಯ ಭರವಸೆಯನ್ನೂ ಆಧಾರಿಸಿಯೇ ಜಿಎಸ್‌ಟಿ ಪರಿಷತ್ತು ಆರ್ಥಿಕತೆಯ ಮೇಲೆ ಜಿಎಸ್‌ಟಿ ಹೆಚ್ಚಿನ ಪರಿಣಾಮವನ್ನು ಬೀರದಿರಲು ಹಾಗೂ ತೆರಿಗೆ ಕಟ್ಟುವುದನ್ನು ಸರಳೀಕರಿಸಲು ಬೇಕಾದ ವಿನ್ಯಾಸ, ರಚನೆ ಮತ್ತು ಆಡಳಿತಾತ್ಮಕ ನಿಯಮಗಳನ್ನು ರೂಪಿಸುವ ಪ್ರಯೋಗಗಳನ್ನು ಮಾಡುತ್ತಲಿದೆ. ಆದರೆ ಇಂದು ದೇಶದಲ್ಲಿ ಜಿಎಸ್‌ಟಿ ಸಂಗ್ರಹವೇ ಕುಸಿಯುತ್ತಿರುವಾಗ ಅದರಲ್ಲೂ, ಮುಖ್ಯವಾಗಿ, ಜಿಎಸ್‌ಟಿ ಆದಾಯ ಪರಿಹಾರದ ಅಗತ್ಯಗಳಿಗೂ ಮತ್ತು ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆ ಸಂಗ್ರಹಗಳಿಗೂ ನಡುವಿನ ವ್ಯತ್ಯಾಸ ಬೆಳೆಯುತ್ತಾ, ಸರಿಯಾದ ಸಮಯದಲ್ಲಿ ಜಿಎಸ್‌ಟಿ ಪರಿಹಾರದ ಮೊತವನ್ನು ಬಿಡುಗಡೆಯ ವಿಷಯವು ಕೇಂದ್ರ ಹಾಗೂ ರಾಜ್ಯಗಳ ತಿಕ್ಕಾಟಗಳಿಗೆ ಕಾರಣವಾಗುತ್ತಿರುವಾಗ, ಈ ದೇಶದ ಆದಾಯ ಪರಿಹಾರ ವ್ಯವಸ್ಥೆಯನ್ನು ಸುಗಮಗೊಳಿಸುವುದರಲ್ಲಿ ಜಿಎಸ್‌ಟಿ ಪರಿಹಾರ ಕಾಯಿದೆಯ ಪರಿಣಾಮಕತೆ ಪ್ರಶ್ನಾರ್ಹವಾಗಿದೆ.

೨೦೧೫-೧೬ರಲ್ಲಿ ರಾಜ್ಯಗಳ ಎಲ್ಲಾ ತೆರಿಗೆಗಳೂ ಎಸ್‌ಜಿಎಸ್‌ಟಿಯಲ್ಲಿ ವಿಲೀನವಾಗುವ ಮುನ್ನ ಎಷ್ಟು ಮೊತ್ತದ ತೆರಿಗೆಯನ್ನು ಸಂಗ್ರಹಿಸುತ್ತಿದ್ದವೋ ಅದರ ಶೇ.೧೪ರಷ್ಟು ಹೆಚ್ಚುವರಿ ಮೊತ್ತವನ್ನು ಪ್ರತಿವರ್ಷ ರಾಜ್ಯಗಳ ತೆರಿಗೆ ಸಂಗ್ರಹವಾಗುತ್ತಿದ್ದವೆಂಬ ಲೆಕ್ಕದಲ್ಲಿ ರಾಜ್ಯಗಳ ಎಸ್‌ಜಿಎಸ್‌ಟಿ ಯನ್ನು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ ೨೦೨೨ರ ಜೂನ್  ೩೦

ರ ತನಕ ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ೨೦೧೭ರ ಜುಲ ೧ ರಿಂದ ಪಾನ್ ಮಸಾಲ, ತಂಬಾಕು ಮತ್ತಿತರ ತಂಬಾಕು ಉತ್ಪನ್ನಗಳು, ನೀರು ಸೋಡಾ, ಪ್ರಯಾಣಿಕರ ವಾಹನ ಇವೇ ಇನ್ನಿತ್ಯಾದಿ ಸರಕುಗಳ ಮೇಲೆ ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಜಿಎಸ್‌ಟಿ ಪರಿಹಾರ ನಿಧಿಗೆ ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸುವ ಪ್ರಯತ್ನವನ್ನು ಮಾಡುತ್ತಾ ಬರಲಾಗಿದೆ. ಆದರೂ ಜಿಎಸ್‌ಟಿ ಪರಿಹಾರ ಧನವನ್ನು ರಾಜ್ಯಗಳಿಗೆ ವಿತರಣೆ ಮಾಡುವುದರಲ್ಲಿ ಮಾತ್ರ ನಿರಂತರವಾಗಿ ವಿಳಂಬವಾಗುತ್ತಲೇ ಬಂದಿದೆ. ಉದಾಹರಣೆಗೆ ಏಪ್ರಿಲ್ ಮತ್ತು ಮೇ ತಿಂಗಳಲಿ ನೀಡಬೇಕಿದ್ದ ೧೭,೭೮೯ ಕೋಟಿ ರೂ.ಗಳ ಮೊತ್ತವು ಬಿಡುಗಡೆಯಾಗಿದ್ದು ೨೦೧೯ರ ಜುಲೈನಲ್ಲಿ. ಹಾಗೆಯೇ ೨೦೧೯ರ ಜೂನ್ ಮತ್ತು ಜುಲೈನಲ್ಲಿ ನೀಡಬೇಕಿದ್ದ ೨೭,೯೫೫ ಕೋಟಿ ರೂಗಳು ಬಿಡುಗಡೆಯಾಗಿದ್ದು ಆಗಸ್ಟ್‌ನಲ್ಲಿ. ಹಾಗೂ ೨೦೧೯ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನ ಬಾಕಿಯಾಗಿದ್ದ ೩೫,೨೯೮ ಕೋಟಿ ರೂ.ಗಳು ಬಿಡುಗಡೆಯಾಗಿದ್ದು ಡಿಸೆಂಬರ್ ಮಧ್ಯದಲ್ಲಿ.

ಜಿಎಸ್‌ಟಿ ಪರಿಹಾರ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಹೊಸದೇನೂ ಅಲ್ಲವಾದರೂ ಜಿಎಸ್‌ಟಿ ಪರಿಹಾರ ಪಾವತಿ ಸಂಬಂಧಿಸಿದಂತೆ ಹಾಲಿ ಉದ್ಭವವಾಗಿರುವ ಬಿಕ್ಕಟ್ಟಿನ ಹಿಂದಿನ ಕಾರಣಗಳು ವಿಶೇಷವಾಗಿವೆ. ಮೊದಲಿಗೆ ಎಸ್‌ಜಿಎಸ್‌ಟಿ ಸಂಗ್ರಹದಲ್ಲಿ ಕಂಡುಬಂದಿರುವ ಕುಸಿತ ಮತ್ತು ಭಾರತದ ಆರ್ಥಿಕತೆಯ ಒಟ್ಟಾರೆ ಇಳಿಮುಖತೆಯ ಕಾರಣದಿಂದಾಗಿ ಒಟ್ಟಾರೆ ಜಿಎಸ್‌ಟಿ ಸಂಗ್ರಹದಲ್ಲೇ ಇಳಿಕೆಯಾಗಿ ಉದ್ಭವಿಸಿರುವ ಆದಾಯ ಅನಿಶ್ಚತೆಯೇ ಹಾಲಿ ವಿಳಂಬಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಜಿಡಿಪಿಯ ದರದಲ್ಲಿ ಏರಿಕೆ ಕಂಡು ತೆರಿಗೆ ಸಂಗ್ರಹದ ಸಾಧ್ಯತೆಯು ಹೆಚ್ಚಾಗದೆ ಜಿಎಸ್‌ಟಿ ಪರಿಹಾರ ಪಾವತಿಯಲ್ಲಿ ವಿಳಂಬವು ಮುಂದುವರೆಯುವುದಲ್ಲದೆ ಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆಯೂ ಹೆಚ್ಚಾಗಲಿದೆ. ಎರಡನೆಯದಾಗಿ ಮೊದಲ ಕಾರಣವನ್ನು ಮತ್ತಷ್ಟು ಬಿಗಡಾಯಿಸುವ ಸಂಗತಿಯೇನೆಂದರೆ ಒಂದೊಮ್ಮೆ ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆ ಕುಸಿದಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಜಿಎಸ್‌ಟಿ ಕಾಯಿದೆಯು ಯಾವುದೇ ಮಾರ್ಗದರ್ಶನವನ್ನು ನೀಡುವುದಿಲ್ಲ. ಕಾಂiದೆಯ ವ್ಯಾಪ್ತಿಯಲ್ಲಿ ಜಿಎಸ್‌ಟಿ ವ್ಯವಸ್ಥೆಗೆ ಪರಿವರ್ತನೆಗೊಳ್ಳುತ್ತಿರುವ ಅವಧಿಯಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಪಾವತಿ ಮಾಡುವುದು ಸಂಪೂರ್ಣವಾಗಿ ಕೇಂದ್ರದ ಜವಾಬ್ದಾರಿಯಾಗಿದೆ. ಆದರೆ ಆರ್ಥಿಕತೆಯು ಇಳಿಮುಖಗೊಂಡಿರುವ ಈ ಸಂದರ್ಭದಲ್ಲಿ  ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸುವುದು ಭಾರತದ ಸಾರ್ವಜನಿಕ ಹಣಕಾಸು ನಿರ್ವಹಣೆಗೆ ಸವಾಲಾಗಿ ಪರಿಣಮಿಸಲಿದೆ.

ಬಿಹಾರಿನಂತಹ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಬಹುಪಾಲು ರಾಜ್ಯಗಳಿಗೆ ಎಸ್‌ಜಿಎಸ್‌ಟಿ ಯಡಿ ವಿಲೀನವಾದ ತೆರಿಗೆ ಬಾಬತ್ತುಗಳಲ್ಲಿ ಶೇ.೧೪ರಷ್ಟು ಅಭಿವೃದ್ಧಿಯನ್ನು ಸಾಧಿಸುವ ಸಾಮರ್ಥ್ಯವಿಲ್ಲ. ಆದ್ದರಿಂದಲೇ ಆದಾಯ ರಕ್ಷಣೆಯ ಭರವಸೆಯು ಜಿಎಸ್‌ಟಿ ವ್ಯವಸ್ಥೆಯೊಡನೆ ಹೊಂದಿಕೊಂಡು ಹೋಗುವಂತಹ ವಿತ್ತೀಯ ಅವಕಾಶವನ್ನು ದೊರಕಿಸುತ್ತದೆ. ಈ ಕಾರಣಗಳಿಗಾಗಿಯೇ, ಜಿಎಸ್‌ಟಿ ಆದಾಯ ಪರಿಹಾರ ವ್ಯವಸ್ಥೆಯನ್ನು ಇನ್ನೂ ಮೂರು ವರ್ಷಗಳ ಕಾಲ ಅಂದರೆ ೨೦೨೪-೨೫ರವರೆಗೆ ವಿಸ್ತರಿಸಬೇಕೆಂದು ಹಲವಾರು ರಾಜ್ಯಗಳು ೧೫ನೇ ಹಣಕಾಸು ಅಯೋಗದ ಮೊರೆ ಹೋಗಿದ್ದಾರೆ. ಜಿಎಸ್‌ಟಿ ಪರಿಹಾರ ಅವಧಿಯನ್ನು ವಿಸ್ತರಿಸುವ ಅಧಿಕಾರವು ನಾಮಮಾತ್ರಕ್ಕೆ ಜಿಎಸ್‌ಟಿ ಪರಿಷತ್ತಿಗಿದೆಯಾದರೂ, ಅಂತಿಮ ತೀರ್ಮಾನವನ್ನು ಮಾತ್ರ ಕೇಂದ್ರ ಸರ್ಕಾರವೇ ತೆಗೆದುಕೊಳ್ಳಬೇಕಿರುತ್ತದೆ. ಆದರೆ ಒಟ್ಟಾರೆ ಜಿಎಸ್‌ಟಿ ಸಂಗ್ರಹವೇ ಕುಸಿದಿರುವಾಗ ಈ ಕೂಡಲೇ ಜಿಎಸ್‌ಟಿ ಪರಿಹಾರ ಹೆಚ್ಚುವg ತೆರಿಗೆಯನ್ನು ಈ ಸದ್ಯಕ್ಕೆ ಹಿಂತೆಗೆದುಕೊಳ್ಳುವ ಯಾವ ಸೂಚನೆಯೂ ಇಲ್ಲ. ಆದರೆ ಒಂದು ವೇಳೆ ಜಿಎಸ್‌ಟಿ ಪರಿಹಾರದ ಅವಧಿಯನ್ನು ಹೆಚ್ಚಿಸಿದರೂ, ತೆರಿಗೆ ಸಂಗ್ರಹ ಸಾಧ್ಯತೆ ಹೆಚ್ಚಾಗದೆ ಅಥವಾ ಒಟ್ಟಾರೆ ಜಿಡಿಪಿ ಅಭಿವೃದ್ಧಿಯಲ್ಲಿ ಹೆಚ್ಚಳವಾಗದೆ, ಈಗ ನಿಗzಯಾಗಿರುವ ಶೇ.೧೪ರ ತೆರಿಗೆ ಹೆಚ್ಚಳದ ದರದಲ್ಲಿ ಪರಿಹಾರವನ್ನು ಕೊಡುವಷ್ಟು ವಿತ್ತೀಯ ಸಾಮರ್ಥ್ಯವನ್ನು ಕೇಂದ್ರ ಸರ್ಕಾರವು ಹೊಂದಿದೆಯೇ?

ಹಾಲಿ ಪರಿಸ್ಥಿತಿಯು ಭಾರತದ ವಿತ್ತೀಯ ಒಕ್ಕೂಟ ರಚನೆಗೆ ಎದುರಾಗುತ್ತಿರುವ ಬಿಕ್ಕಟ್ಟಿನ ಮುನ್ಸೂಚನೆಯೇ? ಆ ಬಗೆಯ ಯಾವುದೇ ತೀರ್ಮಾನಗಳಿಗೆ ಬರಲು ಇನ್ನೂ ಸಮಯ ಬೇಕು. ಆದರೆ ಜಿಎಸ್‌ಟಿ ವ್ಯವಸ್ಥೆಗೆ ಸ್ಥಿತ್ಯಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಆದಾಯ ರಕ್ಷಣೆಗೆ ನಿಗದಿಯಾಗಿರುವ ತೆರಿಗೆ ಸಂಗ್ರಹ ಹೆಚ್ಚಳದ ದರವನ್ನು ಏಕಪಕ್ಷೀಯವಾಗಿ ಕಡಿತ ಮಾಡುವುದು ವಿತ್ತೀಯ ಒಕ್ಕೂಟ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುವ ಸಂಭವವನ್ನು ನಿರಾಕರಿಸಲಾಗುವುದಿಲ್ಲ. ತೆರಿಗೆ ನಷ್ಟಕ್ಕೆ ಸೂಕ್ತವಾದ ಪರಿಹಾರ ವ್ಯವಸ್ಥೆ ಇಲ್ಲವಾದಾಗ ಪರಿಹಾರದ ಅವಧಿಯ ನಂತರ ರಾಜ್ಯಗಳು ಜಿಎಸ್‌ಟಿ ವ್ಯವಸ್ಥೆಯೊಳಗೆ ಮುಂದುವರೆಯಲು ಬೇಕಾದ ಬಂಧವೇ ಇಲ್ಲವಾಗುತ್ತದೆ. ಅದೇ ಸಮಯದಲ್ಲಿ ಪರಿಹಾರ ವ್ಯವಸ್ಥೆಯು ನಿರಂತರವಾಗಿ ಮುಂದುವರೆಯುವುದೂ ಸಾಧ್ಯವಿಲ್ಲವೆಂಬುದನ್ನು ರಾಜ್ಯಗಳು ಅರ್ಥಮಾಡಿಕೊಂಡು ಬರಲಿರುವ ಪರಿಹಾರ ಮೊತ್ತವನ್ನು ಆಧರಿಸಿ ತಮ್ಮ ವೆಚ್ಚದ ಯೋಜನೆಯನ್ನು ರೂಪಿಸುವುದನ್ನೂ ಸಹ ಬಿಡಬೇಕಿರುತ್ತದೆ. ಹೀಗಾಗಿ ರಾಜ್ಯಗಳು ತಮ್ಮದೇ ಆದ ತೆರಿಗೆ ಹಾಗೂ ತೆರಿಗೆಯೇತರ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಬೇಕಿರುತ್ತದೆ ಅಥವಾ ತಮ್ಮ ಅನುತ್ಪಾದಕ ವೆಚ್ಚಗಳ ಮೇಲೆ ನಿಯಂತ್ರಣವನ್ನು ಸಾಧಿಸಿ ವಿತ್ತೀಯ ಧೃಢೀಕರಣದ ಹಾದಿಯನ್ನು ಹಿಡಿಯಬೇಕಿರುತ್ತದೆ. ಹೀಗಾಗಿ ಪರಿಹಾರದ ಅವಧಿಯಾದ ನಂತರದಲ್ಲಿ ಎದುರಾಗಬಹುದಾದ ಯಾವುದೇ ವಿತ್ತೀಯ ಆಘಾತವನ್ನು ಎದುರಿಸಲು ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳುವುದಕ್ಕೆ ರಾಜ್ಯಗಳು ಈ ಅವಧಿಯನ್ನು ಬಳಸಿಕೊಳ್ಳಬಹುದು.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top