ಕುಸಿಯುತ್ತಲೇ ಇರುವ ಆರ್ಥಿಕತೆ

ಆರ್ಥಿಕತೆಯಲ್ಲಿ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಲು ಒಂದು ಪ್ರಬಲವಾದ ಹಾಗೂ ವಿಶಾಲವಾದ ವಿತ್ತೀಯ ಪ್ರೇರಣೆಯ ಅಗತ್ಯವಿದೆ

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡರೂ ಸಹ ಭಾರತದ ಆರ್ಥಿಕತೆಯ ೨೦೧೯ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಮತ್ತಷ್ಟು ತೀವ್ರವಾಗಿ ಇಳಿಕೆಯಾಗಿದೆ. ೨೦೧೯-೨೦ರ ಸಾಲಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕಕ್ಕೆ ಹೋಲಿಸಿದರೆ ಭಾರತದ ಒಟ್ಟಾರೆ ದೇಶೀಯ ಉತ್ಪನ್ನವು (ಜಿಡಿಪಿ) ಶೇ.೫ರ ಅಭಿವೃದ್ಧಿ ದರದಿಂದ ಶೇ.೪.೫ಕ್ಕೆ ಕುಸಿದಿದೆ. ಹೀಗಾಗಿ ಅಭಿವೃದ್ಧಿ ದರವು ಸತತವಾಗಿ ಆರು ತ್ರೈಮಾಸಿಕಗಳಲ್ಲೂ ನಿರಂತರವಾಗಿ ಇಳಿಕೆಯಾಗುತ್ತಲೇ ಇದ್ದು ಈ ಅವಧಿಯಲ್ಲಿ ಒಟ್ಟಾರೆಯಾಗಿ ಶೇ.೩.೬ರಷ್ಟು ಕುಸಿತವಾಗಿದೆ. ೨೦೧೩ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಅಭಿವೃದ್ಧಿ ದರವು ಶೇ.೪.೩ರಶ್ಟು ಕುಸಿತವಾಗಿದ್ದನ್ನು ಬಿಟ್ಟರೆ ಹೊಸ ಲೆಕ್ಕಾಚಾರದ ಜಿಡಿಪಿ ಸರಣಿ ಪ್ರಾರಂಭವಾದ ಮೇಲೆ ಈ ತ್ರೈಮಾಸಿಕದ ಶೇ.೪.೫ರ ದರವೇ ಅತ್ಯಂತ ಕನಿಷ್ಟಮಟ್ಟದ್ದಾಗಿದೆ.

ಸರ್ಕಾರಿ ವೆಚ್ಚದಲ್ಲಿ ಹೆಚ್ಚಳವಾಗಿದ್ದರೂ ಆರ್ಥಿಕ ಸನ್ನಿವೇಶವು ಹೆಚ್ಚೆಚ್ಚು ಹದಗೆಡುತ್ತಿರುವುದು ಖಾಸಗಿ ಬೇಡಿಕೆಯ ಯಾವುದೇ ಸುಧಾರಣೆ ಕಂಡುಬರದಿರುವುದನ್ನೆ ಸೂಚಿಸುತ್ತವೆ. ಬಳಕೆಯು ಹೆಚ್ಚದಿರುವುದರಿಂದ ಮತ್ತು ಖಾಸಗಿ ಹೂಡಿಕೆಯು ಸ್ಥಗಿತಗೊಂಡಿರುವುದರಿಂದ ಇದು ಸಂಭವಿಸಿದೆ. ವಾರ್ಷೀಕರಣಗೊಂಡ ಸರಣಿ ಅನುಕ್ರಮನುಸಾರ ನೋಡಿದಲ್ಲಿ ಜಿಡಿಪಿ ಅಭಿವೃದ್ಧಿ ದರವು ಶೇ.೩.೬ ಮಾತ್ರ ಆಗಿದೆ. ಇನ್ನು ಖಾಸಗಿ ಅಂತಿಮ ಬಳಕೆ ವೆಚ್ಚದ ಧೋರಣೆಯನ್ನು ಗಮನಿಸಿದಲ್ಲಿ ಮೊದಲ ತ್ರೈಮಾಸಿಕದಲ್ಲಿ ಶೇ.೩.೧ರಷ್ಟಿದ್ದದ್ದು ಎರಡನೇ ತ್ರೈಮಾಸಿಕದಲ್ಲಿ ಶೇ.೫ಕ್ಕೆ ಏರಿಕೆಯಾಗಿದೆ. ಆದರೆ ಈ ಅಂಕಿಅಂಶವು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಬಳಕೆ ವೆಚ್ಚವು ಕುಸಿತಗೊಂಡಿರುವ ಬಗ್ಗೆ ಬರುತ್ತಿರುವ ವರದಿಯ ವಾಸ್ತವಕ್ಕೆ ತದ್ವಿರುದ್ಧವಾಗಿದೆ. ಅಲ್ಲದೆ ಒಟ್ಟಾರೆ ಸ್ಥಿರ ಬಂಡವಾಳ ಸಂಚಯ- ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಷನ್- ವು ಮೊದಲ ತ್ರೈಮಾಸಿಕದಲ್ಲಿ ಶೇ.೪ರಷ್ಟಿದ್ದದ್ದು ಎರಡನೇ ತ್ರೈಮಾಸಿಕದಲ್ಲಿ ಶೇ.೧ಕ್ಕೆ ಕುಸಿದಿದೆ. ಆದರೆ ಸರ್ಕಾರದ ಅಂತಿಮ ಬಳಕಾ ವೆಚ್ಚ ಮಾತ್ರ ಮೊದಲ ತ್ರೈಮಾಸಿಕದಲ್ಲಿ ಶೇ.೮.೮ರಷ್ಟಿದ್ದದ್ದು ಎರಡನೇ ತ್ರೈಮಾಸಿಕದಲ್ಲಿ ಶೇ. ೧೫.೬ಕ್ಕೆ ಏರಿದೆ.  ಕಾರ್ಪೊರೇಟುಗಳ ಹೆಚ್ಚುತ್ತಿರುವ ಋಣಭಾರ, ಹಣಕಾಸೇತರ ಬ್ಯಾಂಕಿಂಗ್ ಕಂಪನಿಗಳಲ್ಲಿನ ಬಿಕ್ಕಟ್ಟು, ಯಾವುದೇ ರಿಸ್ಕು ತೆಗೆದುಕೊಳ್ಳಲು ಹಿಂಜರಿಯುತ್ತಿರುವ ಬ್ಯಾಂಕುಗಳು ..ಇತ್ಯಾದಿಗಳೆಲ್ಲವೂ ಒಟ್ಟು ಸೇರಿ ಹೂಡಿಕೆಯ ಬೇಡಿಕೆಯನ್ನು ಕಡಿತಗೊಳಿಸಿದೆ. ಭಾರತವು ಎದುರಿಸುತ್ತಿರುವ ಕುಸಿತಕ್ಕೆ ಇತರ ಜಾಗತಿಕ ಕಾರಣಗಳ ಜೊತೆಜೊತೆಗೆ ಬಂಡವಾಳ ಹೂಡಿಕೆಯ ಸಾಲದ ಬಿಕ್ಕಟ್ಟೆಂಬ ಸರಬರಾಜು ವಲಯದ ಸಮಸ್ಯೆಯೂ ಸೇರಿಕೊಂಡಿದೆ. ಸುದೀರ್ಘ ಕಾಲದಿಂದ ಮುಂದುವರೆಯುತ್ತಿರುವ ಬೇಡಿಕೆಯ ಇಳಿಕೆಯ ಕಾರಣದಿಂದ ಕೈಗಾರಿಕೆಗಳು ತಮ್ಮ  ಉತ್ಪಾದನಾ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಉತ್ಪಾದನೆ ಮಾಡುವ, ಹೂಡಿಕೆಯ ವರ್ತುಲದಲ್ಲಿ ವಿಳಂಬವಾಗುವ ಧೋರಣೆಗಳು ಮತ್ತು ಒಟ್ಟಾರೆ ಅಭಿವೃದ್ಧಿ ದರದ ಕುಸಿತವೂ ಸಹ ದೀರ್ಘ ಕಾಲ ಮುಂದುವರೆಯಬಹುದು.

ಇನ್ನು ಒಟ್ಟಾರೆ ಮೌಲ್ಯ ಸಂಚಯ- ಗ್ರಾಸ್ ವ್ಯಾಲ್ಯೂ ಆಡೆಡ್ (ಜಿವಿಎ)- ದ ಲೆಕ್ಕಾಚಾರದಲ್ಲಿ ನೋಡುವುದಾದಲ್ಲಿ ಅದು ಕಳೆದ ತ್ರೈಮಾಸಿಕದಲ್ಲಿ ಶೇ.೪.೯ ಇದ್ದದ್ದು ಹಾ ತ್ರೈಮಾಸಿಕದಲ್ಲಿ ಶೇ.೪.೩ಕ್ಕೆ ಕುಸಿದಿದೆ. ಹಲವು ಉತ್ಪಾದಕಾ ಕ್ಷೇತ್ರಗಳು ಕುಸಿತವನ್ನು ದಾಖಲಿಸಿದ್ದು ಕಳವಳಕಾರಿಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಶೇ.೨ರಷ್ಟಿದ್ದ ಕೃಷಿಯ ಅಭಿವೃದ್ಧಿಯು ಈ ಎರಡನೇ ತ್ರೈಮಾಸಿಕದಲ್ಲಿ ಶೇ.೨.೧ರಷ್ಟಾಗಿದ್ದರೆ, ಗಣಿಗಾರಿಕೆಯು ಶೇ.೨.೭ರ ಅಭಿವೃದ್ಧಿ ದರದಿಂದ ಶೇ. ೦.೧ಕ್ಕೆ ಕುಸಿದಿದೆ.  ಉತ್ಪಾದಕಾ ಕ್ಷೇತ್ರವು ಮೊದಲ ತ್ರೈಮಾಸಿಕದಲ್ಲಿ ಶೇ.೦.೬ರಷ್ಟು ಹೆಚ್ಚಳವನ್ನು ದಾಖಲಿಸಿದ್ದರೆ ಹಾಲಿ ತ್ರೈಮಾಸಿಕದಲ್ಲಿ ಶೇ.೧ರಷ್ಟು ಕುಸಿತವನ್ನೇ ದಾಖಲಿಸಿದೆ. ವಿದ್ಯುತ್ ಮತ್ತಿತರ ಸಾರ್ವಜನಿಕ ಬಳಕೆ ಮೂಲ ಸೌಕರ್ಯಗಳು ಮೊದಲ ತ್ರೈಮಾಸಿಕದಲ್ಲಿ ಶೇ.೮.೬ರಶ್ಟು ಹೆಚ್ಚಳವನ್ನು ದಾಖಸಿದ್ದರೆ ಎರಡನೇ ಅವಧಿಯಲ್ಲಿ ಅದು ಶೇ. ೩.೬ಕ್ಕೆ ಕುಸಿದಿದೆ. ನಿರ್ಮಾಣ ಕ್ಷೇತ್ರದ ಅಭಿವೃದ್ಧಿ ಮೊದಲ ಅವಧಿಯಲ್ಲಿ ಶೇ. ೫.೭ರಷ್ಟಿದ್ದದ್ದು ಎರಡನೇ ಅವಧಿಯಲ್ಲಿ ಶೇ.೩.೩ಕ್ಕೆ ಇಳಿದಿದೆ. ವ್ಯಾಪಾರ, ಹೋಟೆಲ್, ಸಾರಿಗೆ ಮತ್ತು ಸಂಪರ್ಕ ಕ್ಷೇತ್ರಗಳ ಅಭಿವೃದ್ಧಿಯು ಮೊದಲ ಅವಧಿಯಲ್ಲಿ ಶೇ.೭.೧ರಷ್ಟಿದ್ದದ್ದು ಎರಡನೇ ಅವಧಿಯಲ್ಲಿ ಶೇ.೪.೮ಕ್ಕೆ ಕುಸಿದಿದೆ. ಹಣಕಾಸು ಕ್ಷೇತ್ರವು ಮೊದಲ ತ್ರೈಮಾಸಿಕದಲ್ಲಿ ಶೇ.೫.೯ರಷ್ಟು ಅಭಿವೃದ್ಧಿಯನ್ನು ದಾಖಲಿಸಿದ್ದರೆ ಎರಡನೇ ಅವಧಿಯಲ್ಲಿ ಶೇ.೫.೮ಕ್ಕೆ ಇಳಿದಿದೆ. ಸರ್ಕಾರದ ವೆಚ್ಚವನ್ನು ಆಧರಿಸುವ್ರ ಸಾರ್ವಜನಿಕ ಆಡಳಿತ, ರಕ್ಷಣೆ ಇನ್ನಿತರ ವಲಯಗಳು ಮೊದಲ ಅವಧಿಯಲ್ಲಿ ಶೇ.೮.೫ರಷ್ಟಿದ್ದದ್ದು ಈಗ ಶೇ.೧೧.೬ರಶ್ಟು ಏರಿಕೆಯನ್ನು ದಾಖಲಿಸಿವೆ.

ಈ ಆರ್ಥಿಕ ಇಳಿಕೆಯಿಂದಾಗಿ ಅಸಂಘಟಿತ ಕ್ಷೇತ್ರದ ಮೇಲೆ ತೀವ್ರವಾದ ಹೊಡೆತ ಬಿದ್ದಿರುವುದು ನಿಜವಾದರೂ ಅಧಿಕೃತ ಅಂಕಿಅಂಶಗಳು ಆ ವಲಯದ ವಾಸ್ತವತೆಯನ್ನು ಸಾಕಷ್ಟು ಪ್ರತಿಫಲಿಸುವುದಿಲ್ಲ. ಕಾರ್ಮಿಕ ಮಾರುಕಟ್ಟೆಯೂ ಸಹ ಈ ಆರ್ಥಿಕ ಇಳಿಮುಖತೆಯಿಂದ ಪೆಟ್ಟು ತಿಂದಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)ಯ ಪ್ರಕಾರ ನಿರುದ್ಯೋಗದ ದರವು ಅಕ್ಟೋಬರ್ ತಿಂಗಳಲ್ಲಿ ಶೇ. ೮.೪೫ಕ್ಕೆ ತಲುಪಿತ್ತು. ಮತ್ತು ಅದು ಕಳೆದ ಮೂರು ವರ್ಷಗಳಲ್ಲೇ ಅತಿ ಹೆಚ್ಚಿನದಾಗಿತ್ತು. ನಿರುದ್ಯೋಗದ ದರವು ಆಗಸ್ಟಿನಲ್ಲಿ ಶೇ.೮.೧೯ರಷ್ಟು ಮತ್ತು ಸೆಪ್ಟೆಂಬರಿನಲ್ಲಿ ಶೇ.೭.೧೬ರಷ್ಟೂ ದಾಖಲಾಗಿತ್ತು. ಸಿಎಂಐಇ ಯು ನಡೆಸುವ ಕನ್ಸ್ಯೂಮರ್ ಪಿರಮಿಡ್ಸ್ ಹೌಸ್‌ಹೋಲ್ಡ್ ಸರ್ವೇ ಪ್ರಕಾರ ೨೦೧೯ರ ನವಂಬರ್ ವೇಳೆಗೆ ಶ್ರಮಶಕ್ತಿಯ ಭಾಗೀದಾರಿಕೆಯು ೭೭ ಅಂಶಗಳಷ್ಟು ಕುಸಿತವಾಗಿ ಶೇ.೪೨.೩೭ಕ್ಕೆ ತಲುಪಿತ್ತು. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ. ಸಿಎಂಐಇ ಯು ಅಧ್ಯಯನ ಮಾಡಿದ ೨೫ ರಾಜ್ಯಗಳಲ್ಲಿ ೧೫ ರಾಜ್ಯಗಳ ಕಾರ್ಮಿಕ ಶಕ್ತಿಯ ಭಾಗೀದಾರಿಕೆ ಅಂಶಗಳು ಅಕ್ಟೋಬರ್‌ಗಿಂತ ನವಂಬರ್‌ನಲ್ಲಿ ಹೆಚ್ಚು ಸಂಕುಚಿತಗೊಂಡಿತ್ತು. ಉದ್ಯೋಗ ಮತ್ತು ಆದಾಯದ ನಷ್ಟಗಳು ಬಳಕೆ ವೆಚ್ಚವನ್ನು ಕಡಿತಗೊಳಿಸಿದೆ. ಮತ್ತು ಇದಕ್ಕೆ ಪ್ರಧಾನ ಕಾರಣ ಗ್ರಾಮೀಣ ಬಿಕ್ಕಟ್ಟೇ ಆಗಿದೆ.

ಮೊದಲ ತ್ರೈಮಾಸಿಕದ ಅಂಕಿಅಂಶಗಳು ಬಿಡುಗಡೆಯಾದಾಗಲೇ ಆರ್ಥಿಕತೆಯ ಪುನಶ್ಚೇತನಕ್ಕೆ ಅಗತ್ಯವಾUದ್ದ ಬೇಡಿಕೆಯನ್ನು  ಸೃಷ್ಟಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ಅದು ಈಗಲೂ ನಡೆದಿಲ್ಲ. ಆದ್ದರಿಂದಲೇ ಗ್ರಾಮೀಣ ಕ್ಷೇತ್ರದ ಪುನಶ್ಚೇತನವನ್ನು ಅದ್ಯತೆಯ ಮೇಲೆ ಮಾಡಬೇಕಿದೆ. ಆದರೆ ಪಿಎಮ್-ಕಿಸಾನ್ ಯೋಜನೆಯನ್ನೂ ಸರಿಯಾಗಿ ಜಾರಿ ಮಾಡುತ್ತಿಲ್ಲ. ನರೇಗ ಯೋಜನೆಯ ಬಾಕಿ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಅದರ ಬಾಕಿ ಮೊತ್ತವೇ ಈಗ ೨೫,೦೦೦ ಕೋಟಿ ರೂಪಾಯಿಗಳನ್ನು ಮೀರುತ್ತಿದೆ. ಈ ಸುಳಿಯಿಂದ ಹೊರಬರಬೇಕೆಂದರೆ ಬಳಕೆ ಮತ್ತು ಆದಾಯವನ್ನು ಒದಗಿಸುವ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು. ಆದರೆ ಅದು ಅಷ್ಟು ತ್ವರಿತವಾಗಿಯೇನೂ ಸಂಭವಿಸುವ ವಿದ್ಯಮಾನವಲ್ಲ.

ಸುಲಭವಾದ ದೇಶೀಯ ಹಣಕಾಸು ಪರಿಸ್ಥಿತಿಗಳು, ಸಕಾರಾತ್ಮಕ ವಿತ್ತೀಯ ಸೂಚನೆಗಳು, ಹಾಗೂ ಸರಬರಾಜಿನಲ್ಲಿರುವ ತೊಡಕುಗಳನ್ನು ನಿವಾರಿಸುವ ಮೂಲಕ ಮಾತ್ರ ಆರ್ಥಿಕತೆಯಲ್ಲಿ ಹುರುಪನ್ನು ಹುಟ್ಟಿಸಲು ಸಾಧ್ಯ. ಸುಗಮವಾದ ಪರಿವರ್ತನಾ ಪ್ರಕ್ರಿಯೆಗಳು ಜಾರಿಯಲ್ಲಿದ್ದಾಗ ವರ್ತುಲ ಸ್ವರೂಪದ ಆರ್ಥಿಕ ಇಳಿಕೆಯನ್ನು ಮ್ಯಾಕ್ರೋ ಹಣಕಾಸು ನೀತಿಗಳ ಮೂಲಕ ಸುಧಾರಿಸಬಹುದು. ಆದರೆ ಹಣಕಾಸು ವ್ಯವಸ್ಥೆಯು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತಿರುವ ಇಂದಿನ ಸಂದರ್ಭದಲ್ಲಿ ಆರ್ಥಿಕತೆಗೆ ಹೆಚ್ಚಿನ ಹಣಕಾಸನ್ನು ಒದಗಿಸುವುದರಿಂದ ಆರ್ಥಿಕತೆಯ ಮೇಲೆ ಯಾವುದೇ ವಾಸ್ತವಿಕ ಪರಿಣಾಮಗಳು ಆಗುವುದಿಲ್ಲ. ಆದ್ದರಿಂದ ವಿಸ್ತರಣಾತ್ಮಕ ವಿತ್ತೀಯ  ನೀತಿಗಳ ಮೂಲಕ ಮಾತ್ರ ಪ್ರಸ್ತುತ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯ. ಆದರೆ ಆರ್ಥಿಕತೆಯಲ್ಲಿ ಪುನಶ್ಚೇತನ ತರುವ ಸಲುವಾಗಿ  ಕಳೆದ ೯ ತಿಂಗಳಿಂದ ಸತತವಾಗಿ ಪಾಲಿಸಿ ರೆಪೋ ದರಗಳನ್ನು ೧೩೫ ಮೂಲಾಂಶಗಳಷ್ಟು ಇಳಿಸಿದ್ದ ರಿಸರ್ವ್ ಬ್ಯಾಂಕು ಹಣದುಬ್ಬರ ಹೆಚ್ಚಾಗಬಹುದೆಂಬ ಆತಂಕದಿಂದ ಎಲ್ಲರ ನಿರೀಕ್ಷೆಗಳಿಗೆ ತದ್ವಿರುದ್ಧವಾಗಿ ಡಿಸೆಂಬರ್ ೫ ರಂದು ರೆಪೋ ದರದಲ್ಲಿ ಯಾವುದೇ ಇಳಿಕೆಯನ್ನು ಮಾಡಲಿಲ್ಲ. ಅಲ್ಲದೆ ಅದು ೨೦೨೦ರ ಸಾಲಿನ ಭಾರತದ ಒಟ್ಟಾರೆ ವಾರ್ಷಿಕ ಜಿಡಿಪಿ ಅಭಿವೃದ್ಧಿ ದರವನ್ನು ಶೇ. ೬.೧ರಿಂದ ಶೇ. ೫ಕ್ಕೆ ಇಳಿಸಿದೆ. ಮತ್ತು ಚಿಲ್ಲರೆ ಹಣದುಬ್ಬರ ದರದ ಬಗ್ಗೆ ಮೊದಲಿದ್ದ ಅಂದಾಜಾದ ಶೇ.೩.೫- ೩.೭ ಅನ್ನು  ಶೇ. ೫.೧-೪.೭ಕ್ಕೇರಿಸಿದೆ. ಅಕ್ಟೊಬರ್ ಕೊನೆಯ ವೇಳೆಗಾಗಲೇ ಭಾರತದ ವಿತ್ತೀಯ ಕೊರತೆಯು ಹಾಕಿಕೊಳ್ಳಲಾಗಿದ್ದ ಮಿತಿಯ ಶೇ.೧೦೦ರಷ್ಟನ್ನು ದಾಟಿಯಾಗಿತ್ತು. ಇಂದಿನ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಸರ್ಕಾರವು ತಾನು ವಿಧಿಸಿಕೊಂಡಿರುವ ಶೇ.೩.೩ರ ವಿತ್ತೀಯ ಕೊರತೆಯ ಮಿತಿಯನ್ನು ಸಡಿಲಿಸುವುದು ಒಳ್ಳೆಯದು. ಏಕೆಂದರೆ ಅದನ್ನು ಪಾಲಿಸಬೇಕೆಂದರೆ ಸರ್ಕಾರವು ತನ್ನ ವೆಚ್ಚಗಳ ಮೇಲೆ ನಿರ್ಬಂಧವನ್ನು ಹೇರಿಕೊಳ್ಳಬೇಕಾಗುತ್ತದೆ. ಆದರೆ ಅದು ಆರ್ಥಿಕತೆಯಲ್ಲಿ ಇಂದು ಅತ್ಯಗತ್ಯವಾಗಿರುವ ಬೇಡಿಕೆಯನ್ನು ಮತ್ತಷ್ಟು ಕುಗ್ಗಿಸುತ್ತದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Using ordinance to protect freedom of expression from foul speech may result in damaging decent communication.

Only an empowered regulator can help boost production and cut coal imports.

Biden’s policy of the “return to the normal” would be inadequate to decisively defeat Trumpism.

*/ */

Only a generous award by the Fifteenth Finance Commission can restore fiscal balance.

*/ */

The assessment of the new military alliance should be informed by its implications for Indian armed forces.

The fiscal stimulus is too little to have any major impact on the economy.

The new alliance is reconfigured around the prospect of democratic politics, but its realisation may face challenges.

A damning critique does not allow India to remain self-complacent on the economic and health fronts.

 

The dignity of public institutions depends on the practice of constitutional ideals.

The NDA government’s record in controlling hunger is dismal despite rising stocks of cereal.

 

Back to Top