ಮಹಾರಾಷ್ಟ್ರ ರಾಜಕಾರಣದ ಪಲ್ಲಟಗಳು

ಭಾರತೀಯ ಜನತಾ ಪಕ್ಷದ ಏಕರೂಪೀಕರಿಸುವ ಯೋಜನೆಗಳೇ ವಿಭಿನ್ನ ರಾಜಕೀಯ ಪ್ರಯೋಗಗಳ ಅಗತ್ಯವನ್ನು ಹುಟ್ಟುಹಾಕುತ್ತಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಮಹಾರಾಷ್ಟ ಶಾಸನಾ ಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದ ಒಂದು ತಿಂಗಳ ನಂತರ  ಸರ್ಕಾರವೊಂದು ರಚನೆಯಾಗಿದೆ. ಹಾಲಿ ಇದ್ದ ರಾಜಕೀಯ ಸಂದರ್ಭವು ಸೃಷ್ಟಿಸಿದ ಅನಿವಾರ್ಯತೆಯಿಂದಾಗಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ತ್ರಿವಳಿ ಮೈತ್ರಿಕೂಟದ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ತಾಂತ್ರಿಕವಾಗಿ ನೋಡಿದರೆ ಚುನಾವಣಾ ಪೂರ್ವ ಮೈತ್ರಿಕೂಟವನ್ನು ರಚಿಸಿಕೊಂಡಿದ್ದ ಬಿಜೆಪಿ-ಶಿವಸೇನಾ ಕೂಟವು ಬಹುಮತವನ್ನು ಪಡೆದಿದ್ದರಿಂದ ಅವೆರಡೂ ಕೂಡಿ ಸರ್ಕಾರವನ್ನು ರಚಿಸಬಹುದಾಗಿತ್ತು. ಆದರೆ ಆ ಎರಡೂ ಪಕ್ಷಗಳಿಗೆ ಮಾತ್ರ ಗೊತ್ತಿರಬಹುದಾದ ಕಾರಣಗಳಿಂದಾಗಿ ಆ ಮೈತ್ರಿಕೂಟ ತನ್ನ ಸರ್ಕಾರವನ್ನು ರಚಿಸಲಾಗಲಿಲ್ಲ. ಆದರೆ ಅಧಿಕಾರಕ್ಕೆ ಬಂದಿರುವ ತ್ರಿವಳಿ ಕೂಟ ಸರ್ಕಾರವು ಸಹ ಅಸಾಧಾರಣವಾದ ಮೈತ್ರಿಕೂಟವಾಗಿದೆ. ಏಕೆಂದರೆ ಈ ಕೂಟದ ಸದಸ್ಯ ಪಕ್ಷಗಳು ಈವರೆಗೆ ಪರಸ್ಪರ ಬದ್ಧ  ರಾಜಕೀಯ  ವೈರಿಗಳಾಗಿದ್ದರು. ಆದರೆ  ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಏಕರೂಪೀಕರಣವನ್ನು ಹೇರುವ ಧೋರಣೆಗಳ ಪ್ರವೃತ್ತಿಗೆ ಪ್ರತಿಕ್ರಿಯಾ ರೂಪದಲ್ಲಿ ಈ ಮೈತ್ರಿಕೂಟವು ಹುಟ್ಟಿಕೊಂಡಿದೆ. ಆದ್ದರಿಂದ ಈ ಬೆಳವಣಿಗೆಯನ್ನು ಮತ್ತೊಂದು ಅವಕಾಶವಾದಿ ನಡೆಯೆಂದು ಸಿನಿಕವಾಗಿ ನೋಡುವುದರಿಂದ ಅಥವಾ ಇತತರಿಗಿಂತ ಪರಿಶುದ್ಧ ರಾಜಕೀಯ ನಿಲುವು ತೆಗೆದುಕೊಳ್ಳುತ್ತಾ ಈ ಬೆಳವಣಿಗೆಯನ್ನು ಸೈದ್ಧಾಂತಿಕ ಶರಣಾಗತಿ ಎಂದು ಭಾವಿಸುವುದರಿಂದ ಎದುರುಗಿರುವ ರಾಜಕೀಯ ಸಂದರ್ಭವನ್ನು ಕಡೆಗಣಿಸಿದಂತಾಗುತ್ತದೆ. ಎರಡನೆಯ ನಿಲುವನ್ನು ವ್ಯಕ್ತಪಡಿಸುವವರಲ್ಲಿ ಒಂದು ವರ್ಗವು ಮುಂದಿಡುತ್ತಿರುವ ಕಾಳಜಿ  ಮತ್ತು ಕಳವಳಗಳಲ್ಲಿ ಹುರುಳಿಲ್ಲವೆಂದಲ್ಲ. ಆದರೆ ಸಕ್ರಿಯ ರಾಜಕಾರಣವೂ ನಿರ್ವಾತ ಸ್ಥಿತಿಯನ್ನು ತಲುಪಲು ಸಾಧ್ಯವಿಲ್ಲವಾದ್ದರಿಂದ ಪ್ರಾಯೋಗಿಕ ಪರ್ಯಾಯಗಳನ್ನು ಒದಗಿಸಬೇಕಾಗುತ್ತದೆ. ಅಂಥಾ ಪ್ರಾಯೋಗಿಕ ಪರ್ಯಾಯಗಳನ್ನು ಒದಗಿಸದಿದ್ದರೆ ಇತರ ಶಕ್ತಿಗಳು ಆ ನಿರ್ವಾತವನ್ನು ತುಂಬುತ್ತವೆ. ಮಹಾರಾಷ್ಟ್ರದ ಸಂದರ್ಭದಲ್ಲಿ ಅಂಥಾ ನಿರ್ವಾತ ಪರಿಸ್ಥಿತಿಯಿಂದ ಬಿಜೆಪಿಗೆ ಅಧಿಕಾರ ದಕ್ಕುತ್ತಿತ್ತು. ಅಂಥಾ ಒಂದು ಸಾಧ್ಯತೆಯು ಕೇವಲ ಈ ಮೂರು ಪಕ್ಷಗಳ ಆಸಕ್ತಿಗೆ ಮಾತ್ರವಲ್ಲದೆ ಬಹುಪಾಲು ಸಂತ್ರಸ್ತ ಜನತೆಯ ಹಿತಾಸಕ್ತಿಯ ಪರವಾಗಿಯೂ ಇಲ್ಲದಿದ್ದುದೇ ಈ ತ್ರಿವಳಿ ಮೈತ್ರಿಕೂಟಕ್ಕೆ ಸಾಕಷ್ಟು ಸಮರ್ಥನೆಯನ್ನು ಒದಗಿಸುತ್ತದೆ. ಚುನಾವಣಾ ಫಲಿತಾಂಶಗಳು ಹೊರಬಿದ್ದ ನಂತರದ ಸನ್ನಿವೇಶದಲ್ಲಿ ಈ ತ್ರಿವಳಿ ಮೈತ್ರಿಕೂಟದ ಪಕ್ಷಗಳು ತಟಸ್ಥರಾಗುಳಿಯದೆ ಎನ್‌ಸಿಪಿ ಅಧ್ಯಕ್ಷರಾದ ಶರದ್ ಪವಾರ್ ನೇತೃತ್ವದಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶ ಮಾಡುವ ನಡೆಯನ್ನು ಅನುಸರಿಸಿದರು. ಯಾವುದೇ ರಾಜಕೀಯ ಸಂಕಥನಗಳನ್ನು ತನ್ನ ಪರವಾಗಿ ಮಾರ್ಪಡಿಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಆಡಳಿತರೂಢ ಪಕ್ಷವು ಹೊಂದಿರುವಾಗ ಇಂತಹ ಸಕ್ರಿಯ ಮಧ್ಯಪ್ರವೇಶಗಳೂ ಮಾತ ಆಡಳಿತರೂಢರನ್ನು ಬಿಕ್ಕಟ್ಟಿಗೆ ದೂಡಬಲ್ಲದಾಗಿತ್ತು. ಒಂದು ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷದ ಈವರೆಗಿನ ಧೋರಣೆಯು ನಿಷ್ಕ್ರಿಯತೆ ಮತ್ತು ಜಡತೆಯಿಂದಲೇ ಕೂಡಿದೆ. ಆದ್ದರಿಂದಲೇ ಅದು ಎದುರಿಗಿರುವ ಸಂದರ್ಭವನ್ನು ಬಳಸಿಕೊಂಡು ತಾನೇ ರಾಜಕೀಯ ಅಜೆಂಡಾವನ್ನು ನಿಗದಿ ಪಡಿಸುವ ಅಥವಾ ಮಾತುಕತೆಯ ಶರತ್ತುಗಳನ್ನು ರೂಪಿಸುವ ಮುಂದೊಡಗನ್ನು ತೆಗೆದುಕೊಳ್ಳಲಿಲ್ಲ. ಆದ್ದರಿಂದಲೇ ಆ ಅವಕಾಶವನ್ನು ಆಳುವ ಪಕ್ಷವು ಬಳಸಿಕೊಂಡಿತು. ಪ್ರಾಯಶಃ ಶರದ್ ಪವಾರರ ಸಲಹೆಯ ಮೇರೆಗೆ  ಕಾಂಗ್ರೆಸ್ ಪಕ್ಷವು ತನ್ನ ತಂತ್ರವನ್ನು ಬದಲಿಸಿಕೊಂಡು ವಿಶಾಲವಾದ ರಾಜಕೀಯ ಗುರಿಯನ್ನು ಸಾಧಿಸಲು ಈ ಸಂದರ್ಭದಲ್ಲಿ ಕಿರಿಯ ಪಾಲುದಾರನ ಪಾತ್ರವಹಿಸಲು ಒಪ್ಪಿಕೊಂಡಿರಬಹುದು. ಬಿಜೆಪಿ ಪಕ್ಷವು ತನ್ನ ಒಕ್ಕೂಟ ವಿರೋಧಿ ಮತ್ತು ಏಕರೂಪಿ ಧೋರಣೆಗಳಿಗೆ ಅನುಗುuವಾಗಿ ರಾಜಕೀಯವಾಗಿ ಹೆಚ್ಚೆಚ್ಚು ಪೆಡಸಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಕಾರ್ಯತಂತ್ರಗಳಲ್ಲಿ ಇದೇ ರೀತಿಯ ಸಡಿಲತೆಯನ್ನು ಮುಂದುವರೆಸುವುದಾದರೆ ಆಳುವ ಪಕ್ಷದ ಅಧಿಪತ್ಯದ ವಿರುದ್ಧ ವಿಶಾಲ ಐಕ್ಯರಂಗಗಳನ್ನು ಕಟ್ಟುವುದರಲ್ಲಿ ಮುಂದೆ ಪ್ರಮುಖ ಪಾತ್ರ ವಹಿಸಬಹುದು.

ಆಳುವ ಪಕ್ಷದ ಅಧಿಪತ್ಯದಲ್ಲಿ ಬಿರುಕುಗಳನ್ನು ತರಲೂ ಸಹ ಬಹುಪಕ್ಷೀಯತೆಯನ್ನು ಗೌರವಿಸುವುದು ಮತ್ತು ವೈವಿಧ್ಯತೆಯನ್ನು ಒಳಗೊಳ್ಳುವುದು ಅತ್ಯಗತ್ಯವಾಗಿದೆ. ಏಕೆಂದರೆ ಪ್ರತಿಸಾವಾಲೇ ಇಲ್ಲವೆಂಬಂತೆ ಸ್ಥಾಪಿತವಾಗಿರುವ ಆಳುವ ಪಕ್ಷದ ಅಧಿಪತ್ಯವು ಈ ಮೌಲ್ಯಗಳ ನಿರಾಕರಣೆಯನ್ನೇ ಆಧರಿಸಿದೆ. ವಿವಿಧ ಬಗೆಯ ಅಸಮಾನತೆಗಳನ್ನೂ ಹಾಗೂ ವೈವಿಧ್ಯತೆಗಳನ್ನೂ ಒಳಗೊಂಡಿರುವ ಭಾರತದಂತ ದೇಶದಲ್ಲಿ ಆಳುವ ಪಕ್ಷದ ಯೋಜನೆಯನ್ನು ಯಾವುದಾದರೊಂದು ಬಗೆಯ ಸರ್ವಾಧಿಕಾರವನ್ನೂ ಜಾರಿ ಮಾಡದೆ ಸಾಧಿಸಲಾಗುವುದಿಲ್ಲ. ಆದರೆ ಒಂದು ಪ್ರಜಾತಾಂತ್ರಿಕ ಚೌಕಟ್ಟಿನೊಳಗೇ ಇಂತಹ ಸರ್ವಾಧಿಕಾರಗಳನ್ನು ಜಾರಿಗೊಳಿಸುವುದಕ್ಕೆ ಹಲವಾರು ಮಿತಿಗಳಿವೆ ಮತ್ತು ಆಳು ಪಕ್ಷವು ಮಾಡುವ  ಅಂತಹ ಪ್ರಯತ್ನಗಳು ಕೆಲವೊಮ್ಮೆ ಹೀನಾಯವಾಗಿ ಸೋಲುತ್ತವೆ. ಮಹಾರಾಷ್ಟ್ರದಲ್ಲಿ ನಡೆಸಿದಂತೆ ಕಳ್ಳ ಮಾರ್ಗದಲ್ಲಿ ಅಧಿಕಾರ ಹಿಡಿಯಲು ನಡೆಸಿದ ಪ್ರಯತ್ನಗಳೂ ಸಹ ಅದೇ ಮಿತಿಯನ್ನು ಸಾಬೀತು ಮಾಡಿದೆ. ಅಧಿಕಾರವನ್ನು ಪಡೆದುಕೊಳ್ಳಲು ಮತ್ತು ಅಧಿಕಾರದಲ್ಲುಳಿಯಲು ಏನು ಬೇಕಾದರೂ ಮಾಡಲು ಸಿದ್ಧವೆಂಬ ಖ್ಯಾತಿಯ ಮರುಳಿಂದ ರಾತ್ರೋರಾತ್ರಿ ರಾಜಕೀಯ ತಂತ್ರಗಾರಿಕೆ ನಡೆಸಿ ೨೦೧೯ರ ನವಂಬರ್ ೨೩ರಂದು ಬಿಜೆಪಿಯ ಫಡ್ನವೀಸ್ ಮುಖ್ಯಮಂತ್ರಿಯಾU ಪ್ರಮಾಣವಚನ ಸ್ವೀಕರಿಸಿದರು. ಆದರೆ ಆಗ ಬಿಜೆಪಿಯ ಕೇಂದ್ರದ ಹಾಗೂ ರಾಜ್ಯದ ನಾಯಕತ್ವವು ತಮ್ಮ ಸಾಮರ್ಥ್ಯಕ್ಕೂ ಮೀರಿದ್ದನ್ನು ಮಾಡುತ್ತಿದ್ದೇವೆಂಬ ಅರಿವನ್ನು ಹೊಂದಿರಲಿಲ್ಲ. ತಮ್ಮಲ್ಲಿರುವ ಅಪಾರ ಧನಬಲ ಹಾಗೂ ಅಧಿಕಾರದಿಂದ ಒತ್ತಡಗಳನ್ನು ಹೇರಿ ವಿರೋಧ ಪಕ್ಷಗಳ ಸದಸ್ಯರ ಐಕ್ಯತೆಯನ್ನು ಮುರಿದು, ಒಡಕನ್ನು ಸೃಷ್ಟಿಸಬಹುದೆಂದೂ ಮತ್ತದನ್ನು ಯಾರೂ ಪ್ರಶ್ನಿಸಲಾರರೆಂದು ಅದು ಭಾವಿಸಿದ್ದಿರಬಹುದು. ಆದರೆ ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಜನರ ನಡುವೆ ಬೇರುಬಿಟ್ಟಿರುವ ರಾಜಕೀಯ, ಬಲವಾದ ಸಾಮಾಜಿಕ ನೆಲೆ ಮತ್ತು ಬಹಳಷ್ಟು ಕಾಲ ಆಳುವ ಸರ್ಕಾರದ ಭಾಗವಾಗಿದ್ದರಿಂದ ಕಟ್ಟಿಕೊಂಡಿರುವ ಸಂಬಂಧ  ಜಾಲಗಳು ಒಟ್ಟುಸೇರಿದರೆ ಆಳುವ ಪಕ್ಷದ ತಂತ್ರಗಳಿಗೆ ಪ್ರತಿತಂತ್ರಗಳನ್ನೂ ರೂಪಿಸಬಹುದು. ಮಾತ್ರವಲ್ಲದೆ ಕೆಲವೊಮ್ಮೆ ಆಳುವ  ಪಕ್ಷದ ಹತಾಶ ತಂತ್ರಗಳನ್ನು ಸೋಲಿಸಲೂಬಹುದೆಂಬುದನ್ನು ಇದು ಸಾಬೀತುಮಾಡಿದೆ. ಬಿಜೆಪಿ ನಾಯಕತ್ವದ ಹತಾಷೆಯೂ ಸಹ ಅಧಿಕಾರದಲ್ಲುಳಿಯಲು ಅದು  ಯಾವರೀತಿ ಪ್ರತಿಯೊಂದು ಹಂತದಲ್ಲೂ ತನ್ನೆಲ್ಲಾ ಅಧಿಕಾರವನ್ನು ಬಳಸಬೇಕಾಗಿದೆಯೆಂಬುದನ್ನೂ ಹಾಗೂ ಅದನ್ನು ಸೋಲಿಸಲು ಅಗತ್ಯವಿರುವ ಪರಿಣಿತಿಯ ಪ್ರಯತ್ನಗಳ ಅಗತ್ಯವನ್ನೂ ಒತ್ತಿಹೇಳುತ್ತದೆ.

ಆಳುವ ಪಕ್ಷದ ಪ್ರಯತ್ನಗಳನ್ನು ಸೋಲಿಸುವಲ್ಲಿ ಸಫಲವಾದ ತ್ರಿವಳಿ ಮೈತ್ರಿಕೂಟವು ಈಗ ತನ್ನ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಜನರೆದುರು ತನ್ನ ವಿಶ್ವಾಸಾರ್ಹತೆಯನ್ನು ಸಾಬೀತುಮಾಡಿಕೊಳ್ಳಬೇಕಿದೆ. ಹಾಗೆ ಮಾಡುವಾಗ ಸಂತ್ರಸ್ತ ಜನತೆಗೆ ಕೂಡಲೇ ತುರ್ತು ಪರಿಹಾರವನ್ನು ಒದಗಿಸಬೇಕೆಂಬ, ಸಾಮಾನ್ಯ ಕನಿಷ್ಟ ಕಾರ್ಯಕ್ರಮದಲ್ಲಿ ಉಲ್ಲೇಖವಾಗಿರುವ, ನೀತಿಗಳಿಗೆ ಒಳಪಟ್ಟು ಕೆಲಸ ನಿರ್ವಹಿಸಬೇಕಿದೆ. ಅದರ ಜೊತೆಗೆ ಬಿಜೆಪಿ ಪಕ್ಷ ಹಾಗೂ ಕೆಲವು ಮಾಧ್ಯಮಗಳು ರೂಪಿಸುವ ಸಂಚಿಗೆ ಬಲಿಯಾಗದೆ ಪರ್ಯಾಯವನ್ನು ಒದಗಿಸುವ ಪ್ರಧಾನ ಕರ್ತವ್ಯದಿಂದ ದಾರಿತಪ್ಪದಂತೆ ನಡೆಯಬೇಕಿದೆ. ಸೈದ್ಧಾಂತಿಕವಾಗಿ ತದ್ವಿರುದ್ಧವಾದ ಧೋರಣೆಯನ್ನು ಹೊಂದಿರುವ ಶಿವಸೇನೆಯೊಂದಿಗೆ ಅಧಿಕಾರ ರಚಿಸಿರುವ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ಸೈದ್ಧಾಂತಿಕ ಸ್ಪಷ್ಟತೆಯನ್ನು ಅಭಿವ್ಯಕ್ತಿಸುತ್ತಾ ಶಿವಸೇನೆಯ ಮೇಲೆ ಪ್ರಭಾವ ಬೀರುವ ಹಾಗೂ ತಾನೇ ರಾಜಕೀಯ ಸಂಕಥನಗಳ ಕೇಂದ್ರೀಯತೆಯನ್ನು ಪಡೆದುಕೊಳ್ಳುವ ಗುರುತರವಾದ ಜವಾಬ್ದಾರಿಯಿದೆ. ಇದನ್ನು ಸಾಧಿಸಬೇಕೆಂದರೆ  ಸಿದ್ಧಾಂತದಲ್ಲಿ ಧೃಢತೆ ಮತ್ತು ತಂತ್ರಗಳಲ್ಲಿ ಸಡಿಲತೆ ಎಂಬ ಸೂತ್ರವನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುವುದು ನಿರ್ಣಾಯಕವಾಗಿರುತ್ತದೆ.

Updated On : 4th Dec, 2019

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Using ordinance to protect freedom of expression from foul speech may result in damaging decent communication.

Only an empowered regulator can help boost production and cut coal imports.

Biden’s policy of the “return to the normal” would be inadequate to decisively defeat Trumpism.

*/ */

Only a generous award by the Fifteenth Finance Commission can restore fiscal balance.

*/ */

The assessment of the new military alliance should be informed by its implications for Indian armed forces.

The fiscal stimulus is too little to have any major impact on the economy.

The new alliance is reconfigured around the prospect of democratic politics, but its realisation may face challenges.

A damning critique does not allow India to remain self-complacent on the economic and health fronts.

 

The dignity of public institutions depends on the practice of constitutional ideals.

The NDA government’s record in controlling hunger is dismal despite rising stocks of cereal.

 

Back to Top