ISSN (Print) - 0012-9976 | ISSN (Online) - 2349-8846

ರಾಜಕಾರಣದ ಸ್ಥಿತಿಗತಿ

.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಮಹಾರಾಷ್ಟ್ರದ ರಾಜಕಾರಣವು ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಶಿವಸೇನಾಗಳೆಂಬ ಮೂರು ಪಕ್ಷಗಳನ್ನೊಳಗೊಂಡ ಎರಡು ತರ್ಕಗಳನ್ನು ಆಧರಿಸಿ ನಡೆಯುತ್ತಿದೆ. ಒಂದು ತರ್ಕವು ಈ ಮೂರು ಪಕ್ಷಗಳು ಒಟ್ಟುಗೂಡಿ ಸರ್ಕಾರವನ್ನು ರಚಿಸಬೇಕೆಂದು ಹೇಳಿದರೆ ಮತ್ತೊಂದು ತರ್ಕವು ಈ ಮೂರೂ ಪಕ್ಷಗಳು ಸೇರಿಕೊಂಡು ಸರ್ಕಾರವನ್ನು ರಚಿಸಲೇ ಬೇಕೆಂದು ಹೇಳುತ್ತದೆ. ರಚಿಸಲೇ ಬೇಕೆಂಬುದು ಅಗತ್ಯವನ್ನು ಹೇಳಿದರೆ ರಚಿಸಬೇಕು ಎಂಬುದು ಆಶಯವನ್ನು ಹೇಳುತ್ತದೆ. ಈ ಮೂರು ಪಕ್ಷಗಳು ಈ ಎರಡು ಧೃವಗಳ ನಡುವೆ ಉಯ್ಯಾಲೆ ಆಡುತ್ತಿದ್ದರೆ ಸದಾ ರಾಜಕೀಯವಾಗಿ ಸರಿ ನಿಲುವುಗಳನ್ನು ಪ್ರತಿಪಾದಿಸುವ  ಹವ್ಯಾಸವುಳ್ಳ ಸರಿ ರಾಜಕೀಯದ ಪಾತ್ರಧಾರಿಗಳು ಯಾವ ಕಾರಣಕ್ಕೂ ಕಾಂಗ್ರೆಸ್ ಮತ್ತು ಎನ್‌ಸಿಪಿ ಗಳು ಶಿವಸೇನೆಯ ಜೊತೆಗೂಡಿ ಸರ್ಕಾರವನ್ನು ರಚಿಸಕೂಡದು ಎಂದು ಪ್ರತಿಪಾದಿಸುತ್ತಿದ್ದಾರೆ. ಇಲ್ಲಿ ಕೂಡದು ಎಂಬ ಅಭಿಪ್ರಾಯವು ರಾಜಕೀಯವು ಸಾಗಬೇಕಾದ ದಿಕ್ಕು ಶಾಶ್ವತವಾದದ್ದೆಂದು ಸೂಚಿಸುತ್ತದ್ವೆ ಹಾಗೂ ರಾಜಕೀಯದಲ್ಲಿ ಇರಬಹುದಾದ ಸಮಾಲೋಚನಾ ಸ್ವಾತಂತ್ರ್ಯವನ್ನೇ ನಿರಾಕರಿಸುತ್ತದೆ. ರಾಜಕೀಯದ ಬಗ್ಗೆ ಪರಿಶುದ್ಧ ನಿಲುವನ್ನು ಇಟ್ಟುಕೊಂಡಿರುವ ಕೆಲವು ರಾಜಕೀಯ ವಿಶ್ಲೇಷಕರು ನೈತಿಕ ನೆಲೆಯಿಂದ ಮೂರೂ ಪಕ್ಷಗಳು ಸರ್ಕಾರ ನಡೆಸುವ ಅರ್ಹತೆಯನ್ನು ಹೊಂದಿಲ್ಲವೆಂದು ಪ್ರತಿಪಾದಿಸುತ್ತಾರೆ. ಈ ದೃಷ್ಟಿಯುಳ್ಳವರ ಪ್ರಕಾರ ಜಾತ್ಯತೀತತೆಯ ಬಗ್ಗೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಎರಡೂ ಪಕ್ಷಗಳ ನಿಲುವುಗಳೂ ಸಹ ಅಷ್ಟು ಧೃಢವಾಗಿಯೇನೂ ಇಲ್ಲ. ಆದರೂ ಈ ಎಲ್ಲಾ ಸಂದೇಹ ಹಾಗೂ ಅನುಮಾನಗಳ ನಡುವೆ ಮೂರೂ ಪಕ್ಷಗಳ ನಡುವೆ ಸಮಾಲೋಚನೆಗಳು ನಡೆಯುತ್ತಿದ್ದು ಮಾಧ್ಯಮದ ವರದಿಗಳು ಹೇಳುವಂತೆ ಬೆಳವಣಿಗೆಗಳು ಸರ್ಕಾರವನ್ನು ರಚಿಸುವತ್ತ ಸಾಗಿವೆ.

ಈ ಮೂರೂ ಪಕ್ಷಗಳ ನಡುವೆ ಮಾತುಕತೆಗಳು ಇನ್ನೂ ಅನಿಶ್ಚಿತವಾಗಿಯೇ ನಡೆಯುತ್ತಿದ್ದು ಸರ್ಕಾರ ರಚಿಸುವಂತಹ ಅಂತಿಮ ನಿರ್ಧಾರಾತ್ಮಕ ಸ್ವರೂಪವನ್ನೇನೂ ಮುಟ್ಟಿಲ್ಲ. ಈ ಮಾತುಕತೆಗಳು ಬಹಿರಂಗವಾಗಿಯಲ್ಲದೆ ಗುಪ್ತವಾಗಿ ನಡೆಯುತ್ತಿದ್ದರೂ, ಆ ಸಮಾಲೋಚನೆಗಳಲ್ಲಿ ಆ ಮೂರೂ ಪಕ್ಷಗಳು ಸರ್ಕಾರವನ್ನು ರಚಿಸಬೇಕಾದ ಅನಿವಾರ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮತಮ್ಮ ಪ್ರತಿಪಾದನೆಯನ್ನು ಸಮಾಲೋಚನೆಗೆ ಒಡ್ಡುತ್ತಿದ್ದಾರೆಂದು ಭಾವಿಸಬಹುದು. ಕಾಂಗ್ರೆಸ್ ಮತ್ತು ಎನ್‌ಸಿಪಿಗಳು ಮುಂದಿಡುತ್ತಿರುವ ಮಾರ್ಪಾಡಾದ ಪ್ರತಿಪಾದನೆಗಳಲ್ಲಿ ಒಂದು ಪ್ರಜ್ನಾಪೂರ್ವಕ ದ್ವಂದ್ವವಿದ್ದು, ಸಾಕಷ್ಟು ಎಚ್ಚರ ಮತ್ತು ಜಾಗೃತಿಗಳೊಂದಿಗೆ ಮುಂದಿಡುತ್ತಿರುವ ಸ್ಪಷ್ಟ ಹೆಜ್ಜೆಗಳಲ್ಲಿ ಅದು ವ್ಯಕ್ತವಾಗುತ್ತಿದೆ. ಈ ಎಚ್ಚರ ಮತ್ತು ಜಾಗೃತಿಗಳೇ ಈ ಸಮಾಲೋಚನೆಗಳಲ್ಲಿ ಅಸಾಧ್ಯತೆಯ ನಿಲುಮೆಗಳನ್ನು ಹಿಂದಕ್ಕೆ ತಳ್ಳಿದಂತೆ ತೋರುತ್ತಿದೆ. ಈ ಸಮಾಲೋಚನೆಗಳು ಶಿವಸೇನೆಯು ತನ್ನ ಒರಟು ಹಿಂದೂತ್ವದ ರಾಜಕೀಯವನ್ನು ಮೆದುಗೊಳಿಸಬೇಕೆಂಬ ವ್ಯಕ್ತಪಡಿಸಬೇಕೆಂಬ ಶರತ್ತು ಬದ್ಧತೆಂiತ್ತ ಸಾಗುತ್ತಿರುವುದೂ ಸಹ ಸ್ಪಷ್ಟವಾಗಿದೆ. ಬಹುತ್ವ ಮತ್ತು ಕೋಮು ಸೌಹಾರ್ದತೆಗಳು ರಾಜಿ ಮಾಡಿಕೊಳ್ಳಲಾಗದ ಮೌಲ್ಯಗಳಾಗಿದ್ದರೂ, ಕೆಲವೊಮ್ಮೆ ಅದನ್ನು ದೂರಗಾಮಿ ಕೈಮರವಾಗಿ ಮಾತ್ರ ಭಾವಿಸಬೇಕಾಗುತ್ತದೆಂಬ ಸಲಹೆಯೂ ಇದರಲ್ಲಡಗಿದೆ. ಶಿವಸೇನಾದ ದೃಷ್ಟಿಯಿಂದ ನೋಡಿದಲ್ಲಿ ನೆರೆಪರಿಹಾರದ ವಿಷಯದಲ್ಲಿ ತಾನು ತೋರಿದ ಬದ್ಧತೆಯು ತನ್ನ ಒರಟು ಹಿಂದೂತ್ವದ ನಿಲುವನ್ನು ಹಿಂದಕ್ಕೆ ಸರಿಸುತ್ತದೆಂಬುದು ಅದರ ಪ್ರತಿಪಾದನೆಯಾಗಿರುತ್ತದೆ. ಇಲ್ಲಿ ಕೇಳಬೇಕಿರುವ ಪ್ರಶ್ನೆಗಳಿವು: ಶಿವಸೇನೆಯು ಜವಾಬ್ದಾರಿಯಿಂದ ತನ್ನ ನಿಲುವುಗಳನ್ನು ನಿಭಾಯಿಸಲಿದೆಯೋ ಅಥವಾ ತನ್ನ ಅತ್ಯಂತ ಸಂಪ್ರದಾಯನಿಷ್ಟ ನಿಲುವುಗಳಿಗೆ ಮರಳುತ್ತದೆಯೋ; ಅದರ ಸಂಪ್ರದಾಯನಿಷ್ಟ ಮೌಲ್ಯಗಳೆಂದರೆ ಪ್ರತಿಗಾಮಿ ಇತಿಹಾಸದ ಬಗೆಗಿನ ಅದರ ಬಲವಾದ ನಂಬಿಕೆ ಹಾಗೂ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅದರ ಸಂಪೂರ್ಣ ಮೌನ. ಕಾಂಗ್ರೆಸ್ ಮತ್ತು ಎನ್‌ಸಿಪಿಗಳ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ: ಅದು ಜವಾಬ್ದಾರಿಯುತವಾದ ಬದ್ಧತೆಗಳ ಸುತ್ತಾ ತಮ್ಮ ರಾಜಕೀಯವನ್ನು ಮಾಡುವ ಬದ್ಧತೆಯನ್ನು ಗಟ್ಟಿಗೊಳಿಸಿಕೊಳ್ಳುವುದೇ? ಯಾವ ಪಕ್ಷಗಳಿಂದಲೂ ಈ ಬಗ್ಗೆ ಸ್ಪಷ್ಟವಾದ ಉತ್ತರಗಳನ್ನೇನೂ ನಿರೀಕ್ಷಿಸಲಾಗುವುದಿಲ್ಲ. ಸತತವಾದ ಸಮಾಲೋಚನೆಗಳ ಮೂಲಕ ತಮ್ಮ ಬದ್ಧತೆಗಳನ್ನು ಸ್ಪಷ್ತಗೊಳಿಸಕೊಳ್ಳಬೇಕಾದ ಚಲನಶೀಲ ಅಗತ್ಯಗಳ ಮೇಲೆಯೇ ಎಲ್ಲವೂ ನಿಂತಿದೆ. ಅದು ಮಾತ್ರ ಅಪಾಯಕಾರಿ ಪ್ರತಿಪಾದನೆಗಳನ್ನು ಹೊರಗಿಡಬಹುದು.

ಒಂದು ಸಮಾಲೋಚನಾ ಆಧಾರಿತ ರಾಜಕೀಯವು ಜವಾಬ್ದಾರಿಯುತ ಬದ್ಧತೆಯನ್ನು ಆಧರಿಸಿದ ನಿಲುವುಗಳನ್ನು ಒಳಗೊಂಡಿರುತ್ತದೆ. ಈ ಬದ್ಧತೆಗಳು ಸಾಮಾನ್ಯವಾಗಿ ಅನಿವಾರ್ಯತೆಗಳ ಭಾಷೆಯನ್ನು ಹೊಂದಿರುವುದಿಲ್ಲ. ಇಂಥಾ ಸಮಾಲೋಚನೆಗಳಲ್ಲಿ ಭಾಗಿಯಾಗುವ ಪಕ್ಷಗಳ ನಡುವೆ ಎರಡೂ ಪಕ್ಷಗಳ ಲಾಭದ ದೃಷ್ಟಿಯಿಂದ ಅಧಿಕಾರವನ್ನು ಪಡೆಯಲೇ ಬೇಕೆಂಬ ವಾಸ್ತವಿಕ ಅನಿವಾರ್ಯತೆಗಳ ಭಾಷೆಯು ಬಳಕೆಯಾಗಲ್ಪಡುತ್ತದೆ. ಒಂದು ನತಿಕವಾಗಿ ಪ್ರೇರಿತವಾದ ಸಮಾಲೋಚನೆಗಳಲ್ಲಿ ಅಂತರ್ಗತವಾದ ಜವಾಬ್ದಾರಿಯುತ ಬದ್ಧತೆಗಳು ಸಾಮಾನ್ಯ ಜನರ ಆಸಕ್ತಿಗಳನ್ನೇ ಪ್ರಾಮಾಣಿಕವಾಗಿ ಆದ್ಯತೆಯನ್ನಾಗಿಸಿಕೊಳ್ಳುತ್ತದೆ.

ಇದರರ್ಥ ಅನಿವಾರ್ಯತೆಯಿಲ್ಲದೆಯೂ ಬದ್ಧತೆ ಇರುತ್ತದೆಂದಲ್ಲ. ರಾಜಕೀಯ ಪಕ್ಷಗಳಿಗೆ ಜವಾಬ್ದಾರಿಯುತ ಬದ್ಧತೆಯನ್ನು  ಹುಟ್ಟಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ; ಸಮಾಜದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆ ಹಾಗೂ ಸ್ನೇಹಪರತೆಯನ್ನು ಖಾತರಿಗೊಳಿಸುವ ಬದ್ಧತೆಯನ್ನು ಮಾತ್ರವಲ್ಲದೆ ಸಂಕಷ್ಟದಲ್ಲಿರುವ ಜನರನ್ನು ಕಾಪಾಡುವ ಕಡೆಗೂ ತಮ್ಮ ಬದ್ಧತೆಯನ್ನೂ ತೋರಿಸಿಕೊಳ್ಳಬೇಕಾಗುತ್ತದೆ. ಇತ್ತೀಚಿನ ಚುನಾವಣೆಗಳ ನಂತರದಲ್ಲಿ ಬಂದಿರುವ ಫಲಿತಾಂಶವು ಹುಟ್ಟಿಸಿರುವ ರಾಜಕೀಯ ಅನಿಶ್ಚತೆಯು ಜವಾಬ್ದಾರಿಯುತವಾದ ಬದ್ಧತೆಗೆ ಬೇಕಾದ ಅವಕಾಶವನ್ನು ಸೃಷ್ಟಿಸಬಲ್ಲದು. ಅದೇ ನಂತರದಲ್ಲಿ  ಧಾರ್ಮಿಕ ಗುರುತುಗಳನ್ನು ಆಧರಿಸಿ ಜನರನ್ನು ಕೋಮುವಾದದ ಆಧಾರದಲ್ಲಿ ಧೃವೀಕರಿಸಿ ದಿಕ್ಕುತಪ್ಪಿಸುವ ರಾಜಕಾರಣವನ್ನು ಕೈಬಿಡುವ ನೈತಿಕ ಬದ್ಧತೆಗಳಿಗೂ ಅವಕಾಶವನ್ನು ಕಲ್ಪಿಸಬಹುದು. ಕೋಮು ಸೌಹಾರ್ದತೆಯ ಬಗೆಗಿನ ನೈತಿಕ ಬದ್ಧತೆಯು ಜವಾಬ್ದಾರಿಯುತ ಬದ್ಧತೆಯ ಮೂಲಕ ಒಮ್ಮೆ ಮಾತ್ರ ಸಾಧಿಸುವ ಸಾಧನೆಯಲ್ಲ. ಅದನ್ನು ಪಕ್ಷದ ಕಾರ್ಯಕರ್ತರೊಂದಿಗೆ ಮಾತ್ರವಲ್ಲದೆ ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರೊಂದಿಗೆ ಎಚ್ಚರಿಕೆಯಿಂದ ಕೂಡಿತ ಮತ್ತು ನಿರಂತರವಾದ ಸಮಾಲೋಚನೆ ಹಾಗೂ ಸಂವಾದಗಳ ಮೂಲಕ ಸಾಧಿಸಬೇಕಾಗುತ್ತದೆ.

 

 

 

 

                                                                                                               

 

 

 

 

 

Updated On : 4th Dec, 2019
Back to Top