ಪ್ರಜಾತಂತ್ರದ ಮೇಲೆ ಕಣ್ಗಾವಲು

ನಾಗರಿಕ ಹಾಗೂ ಮಾನವ ಹಕ್ಕುಗಳ ಮೇಲೆ ಬೇಹುಗಾರಿಕೆಯ ಬೆದರಿಕೆಯ ವಿದ್ಯಮಾನವು ಜಾಗತಿಕವಾಗಿಯೇ ಒಂದು ಕಳವಳಕಾರಿ ವಿದ್ಯಮಾನವಾಗಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ನಮ್ಮ ಪ್ರಜಾತಂತ್ರದ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ. ಸಂವಿಧಾನದ ಚೌಕಟ್ಟಿನೊಳಗೆ ವ್ಯಕ್ತಿಗಳು ಚಲಾಯಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ರಾಷ್ಟ್ರೀಯ ಭದ್ರತೆಗೆ ಒದಗಿರುವ ಅಪಾಯವೆಂದು ಪರಿಗಣಿಸಲಾಗದು. ಇತ್ತೀಚಿನ ವರದಿಗಳ ಪ್ರಕಾರ ವಾಟ್ಸಾಪ್ ಒದಗಿಸುವ ದತ್ತಾಂಶಗಳನ್ನು ಆಧರಿಸಿ ಕೆಲಸ ಮಾಡುವ ಪೆಗಾಸಸ್ ಎಂಬ ಕಣ್ಗಾವಲು ಸಾಫ್ಟ್‌ವೇರನ್ನು ಬಳಸಿ ಹಲವಾರು ಭಾರತೀಯರ ಚಲನವಲನಗಳ ಮೇಲೆ ಕಾನೂನುಬಾಹಿರವಾಗಿ ನಿಗಾ ಇರಿಸಲಾಗಿತ್ತೆಂಬುದು ತಿಳಿದುಬಂದಿದೆ. ಈ ಪೆಗಾಸಸ್ ಸಾಫ್ಟ್‌ವೇರನ್ನು ಒಂದು ಮೊಬೈಲ್ ಫೋನಿನಲ್ಲಿ ಸೇರಿಸಿಬಿಟ್ಟರೆ ಆ ಫೋನಿನ ಮೂಲಕ ನಡೆಯುವ ಎಲ್ಲಾ ಮಾತುಕತೆಗಳು, ಸಂದೇಶಗಳು, ಪಾಸ್‌ವರ್ಡ್‌ಗಳು ಮತ್ತು ಸಂಪರ್ಕದಲ್ಲಿರುವವರ ಪಟ್ಟಿ ಎಲ್ಲವನ್ನೂ ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ. ಅದರ ಮೂಲಕ ಮೊಬೈಲಿನಲ್ಲಿರುವ ಕ್ಯಾಮೆರಾ ಮತ್ತು ಮೈಕ್ರೋಫೋನುಗಳನ್ನು ಚಾಲ್ತಿ ಮಾಡಿ ಫೋನಿನ ಸುತ್ತಮುತ್ತಲ ನಡೆಯುವ ಚಟುವಟಿಕೆಗಳನ್ನೂ ಗಮನಿಸಬಹುದು.

ಈ ಪೆಗಾಸಸ್ ಬೇಹುಗಾರಿಕಾ ಸಾಫ್ಟ್‌ವೇರಿನ  ಒಡೆಯ ಇಸ್ರೇಲಿನ ಎನ್‌ಎಸ್‌ಒ ಗ್ರೂಪ್ ಟ್‌ಕ್ನಾಲಜೀಸ್ ಎಂಬ ಸಂಸ್ಥೆ. ಇದರ ಸೇವೆಯನ್ನು ಸೌದಿ ಅರೇಬಿಯಾ ಸರ್ಕಾರವು ತನ್ನ ಜನರ ಚಲನವಲನಗಳ ಮೇಲೆ ನಿಗಾ ಇರಿಸಲು ಮತ್ತು ಬೆದರಿಸಲು ಬಳಸಿಕೊಳ್ಳುತ್ತಿದೆ. ಇದನ್ನು ಬಳಕೊಂಡೇ ಸೌದಿ ಸರ್ಕಾರವು ೨೦೧೮ರಲ್ಲಿ ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾದ ರಾಜತಾಂತ್ರಿಕ ನಿವಾಸದಲ್ಲಿ ಸೌದಿ ಸರ್ಕಾರವನ್ನು ವಿರೋಧಿಸುತ್ತಿದ್ದ ವಾಶಿಂಗ್‌ಟನ್ ಪೋಸ್ಟಿನ ಅಂಕಣಕಾರ ಜಮಾಲ್ ಖಸೋಗಿಯನ್ನೂ ಸಹ ಹತ್ಯೆ ಮಾಡಿತ್ತು.  ಈ ಬಗ್ಗೆ ಭಾರತ ಸರ್ಕಾರವು ಸಂಸತ್ತಿನಲ್ಲಿ ನೀಡಿದ ಉತ್ತರವು ಉಡಾಫೆಯಿಂದ ಕೂಡಿತ್ತು ಮತ್ತು ಅದು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲೇ ತನ್ನೆಲ್ಲಾ ಕೃತ್ಯಗಳನ್ನು ಸಮರ್ಥನೆ ಮಾಡಿಕೊಂಡಿತ್ತು.  ಹಾಲಿ ಇರುವ ಕಾನೂನುಗಳ ಪ್ರಕಾರ ಸಮಾಜದ ಸ್ವಾಸ್ಥ್ಯ ಮತ್ತು ರಾಯ ಭದ್ರತೆಗೆ ಆಪತ್ತು ಎಂದು ತೋರಿದ ಅತ್ಯಂತ  ತುರ್ತು ಪ್ರಕರಣಗಳಲ್ಲಿ ಮಾತ್ರ ಕೆಲವು ನಿರ್ದಿಷ್ಟ ಸಂಪರ್ಕ- ಸಂವಹನಗಳನ್ನು ಕದ್ದು ಕೇಳುವ ಅವಕಾಶವನ್ನು ಒದಗಿಸಲಾಗಿದೆ. ಆದರೆ ೨೦೧೮ರ ಕೆ.ಎಸ್. ಪುಟ್ಟಸ್ವಾಮಿ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ಆದೇಶದ ಪ್ರಕಾರ ಎಲ್ಲದಕ್ಕೂ ರಾಷ್ಟ್ರೀಯ ಭದ್ರತೆಯ ನೆಪವನ್ನು ಒದಗಿಸುವಂತಿಲ್ಲ.

ಈ ಸಾಫ್ಟ್‌ವೇರನ್ನು ಬಳ ಅತ್ಯಂತ ಉಲ್ಲಂಘನೀಯ ಬೇಹುಗಾರಿಕೆಗೆ ಒಳಪಟ್ಟ ೧೨೧ ಜನರಲ್ಲಿ ಬಹುಪಾಲು ಜನರು ಸಾಮಾಜಿಕ ಕಾರ್ಯಕರ್ತರು, ವಿದ್ವಾಂಸರು ಮತ್ತು ಪತ್ರಕರ್ತರೇ ಆಗಿದ್ದಾರೆ. ಈ ವ್ಯಕ್ತಿಗಳ ತಿಳವಕೆ ಮತ್ತು ಭಿನ್ನಮತಗಳನ್ನು ರಾಷ್ಟ್ರೀಯ ಭದ್ರತೆಯ ವಿಷಯವನ್ನಾಗಿ ಮಾಡಲಾಗಿದೆ. ಆದರೆ ಸರ್ಕಾರದ ಉತ್ತರದಾಯಿತ್ವ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಈ ವ್ಯಕ್ತಿಗಳು ಎತ್ತುತ್ತಿರುವ ಪ್ರಶ್ನೆಗಳು ಮಾತ್ರ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಭೀತಿ ಹುಟ್ಟಿಸುತ್ತಿರುವುದಂತೂ ನಿಜ. ಹೀಗಾಗಿ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಇಂಥಾ ವ್ಯಕ್ತಿಗಳನ್ನು ಬೇಹುಗಾರಿಕೆಯಡಿಯಲ್ಲಿ ತರಲು ಸರ್ಕಾರವು ಬಳಸಿರುವ ಈ Sಂಡನೀಯ ಕ್ರಮಗಳನ್ನು ನಾವೆಲ್ಲರೂ ಪ್ರಶ್ನಿಸಲೇ ಬೇಕಿದೆ.

ಮುಂಬೈನಲ್ಲಿ ನಡೆದ ೨೬/೧೧ರ ದಾಳಿಯ ಬಗ್ಗೆ ಪೂರ್ವಭಾವಿ ಬೇಹುಮಾಹಿತಿಯನ್ನು ಸಂಗ್ರಹಿಸಲು ವಿಫಲವಾದ ನಂತರದಲ್ಲಿ ಭಾರತವು ವಿಸ್ತೃತವಾದ ಮಾಹಿv-ದತ್ತಾಂಶಗಳ ಆಗರವನ್ನು ಸೃಷ್ಟಿಸಿಕೊಳ್ಳುತ್ತಿದೆ. ಅದೇರೀತಿ ಬೇಹುಮಾಹಿತಿಗಳ ದತ್ತಾಂಶಗಳನ್ನು ಮತ್ತು ವಿಶಾಲ ಜನಸಂಖ್ಯೆಯ ಮೇಲೆ ಚಲನವಲನಗಳ ಮೇಲೆ ನಿಗಾ ಇರಿಸುವ ಕೇಂದ್ರಗಳನ್ನು ನಿರ್ಮಿಸಲು ಸರ್ಕಾರವು ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸುತ್ತಿದೆ. ನ್ಯಾಷನಲ್ ಇಂಟೆಲೆಜಿನ್ಸ್ ಗ್ರಿಡ್ (ನ್ಯಾಟ್ಗ್ರಿಡ್), ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್ (ಸಿಎಂಎಸ್) ಮತ್ತು ನ್ಯಾಷನಲ್ ಆಟೋಮೇಟೆಡ್ ಫೇಷಿಯಲ್ ರೆಕಾಗ್‌ಷನ್ ಸಿಸ್ಟಮ್ ಆಫ್ ಕ್ರೈಂ ಅಂಡ್ ಕ್ರಿಮಿನಲ್ ಟ್ರಾಕಿಂಗ್ ನೆಟ್‌ವರ್ಕ್ ಅಂಡ್ ಸಿಸ್ಟಮ್ಸ್ (ಸಿಸಿಟಿಎನ್‌ಎಸ್) ನಂತಹ ಯೋಜನೆಗಳ ಮೂಲಕ ದುರ್ಬಳಕೆಯನ್ನು ತಡೆಗಟ್ಟುವ  ಅಥವಾ ಇಂಥಾ ಬೇಹುಗಾರಿಕೆಯನ್ನು ಪ್ರಶ್ನಿಸುವಂತಹ ಯಾವುದೇ ಅವಕಾಶಗಳೇ ಇಲ್ಲದ ಪೊಲೀಸ್ ಪ್ರಭುತ್ವವನ್ನು ನಿರ್ಮಿಸಲಾಗುತ್ತಿದೆ. ಹಂತಹಂತವಾಗಿ ಜಾರಿಯಾಗುತ್ತಿರುವ ಈ ವ್ಯವಸ್ಥೆಯು ಸರ್ಕಾರಕ್ಕೆ ಕ್ರಮೇಣವಾಗಿ ಯಾರಮೇಲಾದರೂ ಯಾವಾಗ ಬೇಕಾದರೂ ಬೇಹುಗಾರಿಕೆ ನಡೆಸಬಹುದಾದ ಅಧಿಕಾರವನ್ನು ನೀಡುತ್ತಿದೆ. ಒಂದೆಡೆ ಜನರ ಮಾತಿಗಳ ಬೃಹತ್ ದತ್ತಾಂಶಗಳು ಸಿದ್ಧಗೊಳ್ಳುತ್ತಿರುವ ವೇಳೆಯಲ್ಲೇ ಈ ಬಗೆಯ ಬೇಹುಗಾರಿಕೆಯನ್ನು ನಿಯಂತ್ರಿಸುವ ಟ್ಟಿನಲ್ಲಿ ನಾವು ಏನಿಲ್ಲವೆಂದರೂ ಒಂದು ದಶಕದಷ್ಟು ಹಿಂದೆ ಉಳಿದಿದ್ದೇವೆ. ಕಾನೂನಿನ ಸಮ್ಮತಿಯಿಲ್ಲದೆ ಕೇವಲ ಒಂದು ಆಡಳಿತಾತ್ಮಕ ಆದೇಶದ ಮೂಲಕ ಜನರ ಮಾಹಿತಿಗಳನ್ನು ಸಂಗ್ರಹಿಸುವ ಪದ್ಧತಿಯೂ ಅತ್ಯಂತ ಕಳವಳಕಾರಿಯಾದ ಬೆಳವಣಿಗೆಯೇ ಆಗಿದೆ. ಉದಾಹರಣೆಗೆ ಯಾವುದೇ ಕಾನೂನಿನ ಚೌಕಟ್ಟು ಅಥವಾ ದತ್ತಾಂಶ ರಕ್ಷಣಾ ಚೌಕಟ್ಟುಗಳು ಜಾರಿಯಾಗದೆಯೇ ಆಡಳಿತ  ವರ್ಗವು ಆಧಾರ್ ಯೋಜನೆಯನ್ನು ಜಾರಿ ಮಾಡುತ್ತಿತ್ತು. ಈಗ ಆ ಯೋಜನೆಯು ಭದ್ರತೆಯ ವಿಷಯಗಳಿಗೆ ಸಂಬಂಧಪಟ್ಟಂತಹ ನಿಚ್ಚಳವಾದ  ಹಲವಾರು ವಿಷಯಗಳಲ್ಲಿ ಸಿಕ್ಕುಗಳಿಗೆ ಸಿಲುಕಿಕೊಂಡಿದೆ. ಮತ್ತು ಈ ವೈಪರೀತ್ಯಗಳಿಗೆ ಬಲಿಯಾದವರಿಗೆ ನೀಡಬಹುದಾದ ಯಾವ ಪರಿಹಾರವೂ ಅದರಲ್ಲಿಲ್ಲ.

ಪ್ರಭುತ್ವವು ನಾಗರಿಕರ ಎಲ್ಲಾ ಮೂಲಭೂತ ಹಕ್ಕುಗಳನ್ನೂ ರಕ್ಷಿಸಬೇಕು. ಅವುಗಳಲ್ಲಿ ಖಾಸಗಿತನದ ಹಕ್ಕೂ ಒಂದು. ಎನ್‌ಎಸ್‌ಒ ಗ್ರೂಪ್ ಟೆಕ್ನಾಲಜೀಸ್ ನಂತಹ ಸಂಸ್ಥೆಗಳು ನಾಗರಿಕರ ಹಕ್ಕುಗಳ ಉಲ್ಲಂಘನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಒಂದು ದೊಡ್ಡ ಉಲ್ಲಂಘನೆಯೇ ಆಗಿದೆ. ಭದ್ರತಾ ಸಂಸ್ಥೆಗಳು ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ  ಮಾತು ಇಷ್ಟೊಂದು ಬೇಜವಾಬ್ದಾರಿಯುತವಾಗಿ ವ್ಯಕ್ತಿಗಳ ಖಾಸUತನದ ಹಕ್ಕುಗಳನ್ನು ಕಿತ್ತುಕೊಳ್ಳಲಾಗದು. ಮತ್ತು ಅತ್ಯಂತ ವಿಶೇಷ ಸಂದರ್ಭವಿಲ್ಲದೆ ಇಂತಹ ಉಲ್ಲಂಘನೆಯನ್ನು ಮಾಡಲಾಗದು. ಇತ್ತೀಚೆಗೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಕಾನೂನುಬಾಹಿರ ಬೇಹುಗಾರಿಕೆಯ ಮೂಲಕ ಪಡೆದುಕೊಂಡ ಮಾಹಿತಿಯನ್ನು ಸಾಕ್ಷಿಯಾಗಿ ಹೇಗೆ ಪರಿಗಣಿಸುತ್ತೀರೆಂದು ಸಿಬಿಐ ಅನ್ನು ಪ್ರಶ್ನಿಸುವ ಮೂಲಕ

ಮುಂಬೈ ಹೈಕೋರ್ಟು ನಾವು ಸಾಗಬೇಕಾದ  ದಾರಿಯನ್ನು ತೋರಿಸಿಕೊಟ್ಟಿದೆ. ಕೋರ್ಟು ಅದನ್ನು ಸಾಕ್ಷಿಯನ್ನಾಗಿ ಪರಿಗಣಿಸುವುದನ್ನು ನಿರಾಕರಿಸಿದ್ದು ಮಾತ್ರವಲ್ಲದೆ ಕಾನೂನುಬಾಹಿರವಾಗಿ ಪಡೆದುಕೊಂಡಿದ್ದ ಎಲ್ಲಾ ಮಾಹಿತಿಯನ್ನು ಅಳಿಸಿಹಾಕಬೇಕೆಂದೂ ಸಹ ಆದೇಶಿಸಿತು. ಈ ಭ್ರಷ್ಟಾಚಾರದ ಪ್ರಕರಣವನ್ನು ಬೇಹುಗಾರಿಕೆಯನ್ನು ಬಳಸಲು ಸೂಕ್ತವಾದ ಸಾರ್ವಜನಿಕ ಸುರಕ್ಷೆಗೆ ಆಪತ್ತು ಒದಗಿದ್ದ ತುರ್ತುಸ್ಥಿತಿಯೆಂದು ಕೋರ್ಟು ಪರಿಗಣಿಸಲಿಲ್ಲ. ರಾಜಕೀಯ ಲಾಭಗಳಿಗಾಗಿಯೂ ಬೇಹುಗಾರಿಕೆಯನ್ನು ಮಾಡಲಾಗುತ್ತದೆ. ಬೇಹುಗಾರಿಕೆಯಲ್ಲಿ ತೊಡಗಿರುವ ಇಟಾಲಿಯನ್ ಸಂಸ್ಥೆಯಾದ ’ಹ್ಯಾಕಿಂಗ್ ಟೀಮ್’ ಸೋರಿಕೆ ಮಾಡಿದ ಇ ಮೇಲ್ ಸರಣಿಯು ೨೦೧೫ರಲ್ಲಿ ಆಂಧ್ರ ಪೊಲೀಸರು ಫೋನ್ ಸಂಭಾಷಣೆಗಳನ್ನು ಕದ್ದಾಲಿಸುವ ಉಪಕರuಗಳನ್ನು ಪಡೆದುಕೊಳ್ಳಲು ಆಸಕ್ತರಾಗಿದ್ದರೆಂಬುದನ್ನು ಬಯಲು ಮಾಡಿತ್ತು. ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ತನ್ನ ರಾಜಕೀಯ ಎದುರಾಳಿಯಾದ ಅಂದಿನ ತೆಲೆಂಗಾಣದ ಮುಖ್ಯಮಂತ್ರಿಯು ತನ್ನ ಫೋನನ್ನು ಕದ್ದಾಲಿಸುತ್ತಿದ್ದಾರೆಂದು ಕೇಂದ್ರ ಗೃಹಮಂತ್ರಿ ರಾಜನಾಠ್ ಸಿಂಗ್‌ಗೆ ದೂರು ನೀqದ್ದ ಸನ್ನಿವೇಶದಲ್ಲಿ ಈ ಪ್ರಸ್ತಾಪವು ಹುಟ್ಟುಕೊಂಡಿತ್ತು. ಮತ್ತೊಂದು ಪ್ರಕರಣದಲ್ಲಿ ಚತ್ತೀಸ್‌ಘಡದ ಪೊಲೀಸ್ ಅಧಿಕಾರಿಗಳು ಎನ್‌ಸ್‌ಒ ಗ್ರೂಪ್ ಟೆಕ್ನಾಲಜೀಸ್ ಪ್ರತಿನಿಧಿಗಳ ಜೊತೆ ಸಮಾಲೋಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. ಸರ್ಕಾರವು ಈ ಉಲ್ಲಾಂಘನೆಯ ಬಗ್ಗೆ ವಾಟ್ಸಾಪ್ ಸಂಸ್ಥೆಯಿಂದ ವರದಿಗಳನ್ನು ಕೇದ್ದರೂ ತನ್ನದೇ ಸಂಸ್ಥೆಗಳು ಏನು ಮಾಡುತ್ತಿವೆಯೆಂಬ ಬಗ್ಗೆ ಮಾತ್ರ ಈವರೆಗೆ ವಿಚಾರಿಸಿಲ್ಲ.

ಮಾತಿ ಹಕ್ಕು ಕಾಯಿದೆಯನ್ನೂ ಒಳಗೊಂಡಂತೆ ಪ್ರತಿಯೊಂದು ಕಾಯಿದೆಯಿಂದಲೂ ವಿನಾಯತಿ ಪಡೆದುಕೊಂಡಿರುವ ಮತ್ತು ಯಾವುದೇ ಮೇಲ್ವಿಚಾರಣೆಂiiಡಿ ಇರದ ಈ  ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ದೇಶದ ಪ್ರಜಾತಂತ್ರಕ್ಕೆ ಹೊರೆಯಾಗಿಟ್ಟಿವೆ. ಅವರ ಪ್ರಧಾನ ಉದ್ದೇಶ ಈ ದೇಶದ ದುರ್ಬಲರನ್ನು ರಕ್ಷಿಸುವುದಕ್ಕಿಂತ ಹೆಚ್ಚಾಗಿ ಅಧಿಕಾರಸ್ಥರನ್ನು ರಕ್ಷಿಸುವುದೇ ಆಗಿದೆ. ಹೀಗಾಗಿ ಭಾರತದಲ್ಲಿ ಬಹಳ ತುರ್ತಾಗಿ ಬೇಹುಗಾರಿಕಾ ಸುಧಾರಣೆಗಳು ಜಾgಯಾಗಬೇಕಿದೆ. ಹೀಗಾಗಿ ಬರಲಿರುವ ಅಧಿವೇಶನದಲ್ಲಿ ೨೦೧೯ರ ಖಾಸಗಿ ದತ್ತಾಂಶ ಸುರಕ್ಷತಾ ಕಾಯಿದೆಯ ಬಗ್ಗೆ ನಡೆಯಲಿರುವ ಚರ್ಚೆಗಳನ್ನೂ ಸೂಕ್ಷ್ಮವಾU ಗಮನಿಸಬೇಕಿದೆ ಮತ್ತು ವರದಿ ಮಾಡಬೇಕಿದೆ. ಪ್ರಜಾಪ್ರತಿನಿಧಿಗಳು ಪಾರದರ್ಶಕತೆಯನ್ನು ಆಗ್ರಹಿಸಬೇಕು, ಜಾರಿಯಲ್ಲಿರುವ ಬೇಹುಗಾರಿಕಾ ವ್ಯವಸ್ಥೆಯನ್ನು ಪುನರಾವಲೋಕಿಸಬೇಕು ಮತ್ತು ಸಂವಿಧಾನ ಬಾಹಿರವಾಗಿ ಬೇಹುಗಾರಿಕೆ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮಾಹಿತಿ iತ್ತು ತಂತ್ರಜ್ನಾನ ವಿಷಯಕ್ಕೆ ಸಂಬಂಧಪಟ್ಟ ಸಂಸದೀಯ ಸಮಿತಿಯು ಪೆಗಾಸಸ್ ಪ್ರಕರಣದ ಬಗ್ಗೆ ತ್ವರಿತವಾಗಿ ತನಿಖೆಯನ್ನು ಪೂರೈಸಬೇಕು iತ್ತು ಒಂದು ಸಮಗ್ರ ಹಾಗೂ ಮುಂದಾಲೋಚನೆಯುಳ್ಳ ವರದಿಯನ್ನು ನೀಡಬೇಕು. ಇಂತಹ ಸನ್ನಿವೇಶಗಳೇ ನಮ್ಮ ಪ್ರಜಾತಾಂತ್ರಿಕ ಸತ್ವವನ್ನು ಪರೀಕ್ಷಿಸುತ್ತವೆ. ಆದ್ದರಿಂದ ಭಾರತದ ಪ್ರಜಾತಾಂತ್ರಿಕ ಸಂಸ್ಥೆಗಳು ಮೂಲಭೂತ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Using ordinance to protect freedom of expression from foul speech may result in damaging decent communication.

Only an empowered regulator can help boost production and cut coal imports.

Biden’s policy of the “return to the normal” would be inadequate to decisively defeat Trumpism.

*/ */

Only a generous award by the Fifteenth Finance Commission can restore fiscal balance.

*/ */

The assessment of the new military alliance should be informed by its implications for Indian armed forces.

The fiscal stimulus is too little to have any major impact on the economy.

The new alliance is reconfigured around the prospect of democratic politics, but its realisation may face challenges.

A damning critique does not allow India to remain self-complacent on the economic and health fronts.

 

The dignity of public institutions depends on the practice of constitutional ideals.

The NDA government’s record in controlling hunger is dismal despite rising stocks of cereal.

 

Back to Top