ISSN (Print) - 0012-9976 | ISSN (Online) - 2349-8846

ವಿಷತುಂಬಿಕೊಂಡಿರುವ ಹೊಲಗದ್ದೆಗಳು

ವಿಷಪೂರಿತವಾದ ಮತ್ತು ಅನಿಯಂತ್ರಿತ ಕ್ರಿಮಿನಾಶಕಗಳ ಬಳಕೆಯು ರೈತರನ್ನೂ ಮತ್ತು ಕಾರ್ಮಿಕರನ್ನೂ ಕೊಲ್ಲುತ್ತಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಕಳೆದ ೧೬ ವರ್ಷಗಳಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶವು ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿರುವುದು ಮಾತ್ರವಲ್ಲದೆ ಅತ್ಯಂತ ಗಂಭೀರವಾದ ಕೃಷಿ ಬಿಕ್ಕಟ್ಟನ್ನೂ ಎದುರಿಸುತ್ತಿದೆ. ಹೀಗಾಗಿ ಆ ಪ್ರಾಂತ್ಯದ ಆರು ಜಿಲ್ಲೆಗಳಲ್ಲಿ ೧೪,೦೦೦ ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಜುಲೈ ತಿಂಗಳಿಂದ ಯಾವತ್‌ಮಲ್ ಮತ್ತಿತರ ಪ್ರದೇಶಗಳಲ್ಲಿ ಒಂದು ಹೊಸ ಬಗೆಯ ಸಮಸ್ಯೆಯು ತಲೆದೋರಿದೆ. ಆ ಪ್ರದೇಶದ ಕೃಷಿ ಕಾರ್ಮಿಕರು ಮತ್ತು ಸಣ್ಣ ರೈತರು ವಿಷಕಾರಿ ಕ್ರಿಮಿನಾಶಕಗಳ ಸೇವನೆಯ ಗುಣಲಕ್ಷಣದಿಂದಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಆದರೆ ಕಳೆದ ಆಗಸ್ಟ್‌ನಲ್ಲಿ ಇದೇ ಕಾರಣದಿಂದಾಗಿ ೧೯ ಜನರು ಸತ್ತದ್ದು ವರದಿಯಾಗುವ ತನಕ ಈ ವಿದ್ಯಮಾನ ಸರ್ಕಾರದ ಅಥವಾ ಮಾಧ್ಯಮಗಳ ಗಮನವನ್ನು ಸೆಳೆದಿರಲಿಲ್ಲ. ರೈತರ ಆತ್ಮಹತ್ಯೆಗಳ ಬಗ್ಗೆ ಜನರಲ್ಲಿ ಹುಟ್ಟಿದ್ದ ಆಕ್ರೋಶ ಮತ್ತು ಆ ಪ್ರದೇಶದ ಕೃಷಿಯ ಪರಿಸ್ಥಿತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಈ ಪ್ರದೇಶದ ಬಗ್ಗೆ ಇನ್ನೂ ಹೆಚ್ಚು ಜಾಗರೂಕರಾಗಿರುವಂತೆಯೂ ಮತ್ತು ಇಂಥಾ ಘಟನೆಗಳು ನಡೆಯದಂತೆ ಎಚ್ಚರದಿಂದಿರುವಂತೆಯೂ ಮಾಡಬೇಕಿತ್ತು. ಕಳೆದ ಕೆಲವು ವರ್ಷಗಳ ಹಿಂದೆಯೇ ಈ ವಿಷಯುಕ್ತ ಕ್ರಿಮಿನಾಶಕಗಳ ಬಗ್ಗೆ ಸೂಚನೆಗಳು ದೊರೆತಿತ್ತು. ಆಗಲೇ ಸರ್ಕಾರವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಯಾವತ್‌ಮಲ್ಲಿನ ೧೯ ರೈತರನ್ನು ಒಳಗೊಂಡಂತೆ ಒಟ್ಟಾರೆಯಾಗಿ ೩೦ ರೈತರು ಈಗಾಗಲೇ ಇದರಿಂದ ಸಾವಿಗೀಡಾಗಿದ್ದಾರೆ. ಇದು ಕ್ರಿಮಿನಾಶಕಗಳ ನಿಯಂತ್ರಣದ ಬಗ್ಗೆ ಮತ್ತು ಅದರ ಬಳಕೆಯ ಬಗ್ಗೆ ನಿಕಟ ಉಸ್ತುವಾರಿ ಮಾಡುವ ಅಗತ್ಯವನ್ನು ಎತ್ತಿತೋರಿಸಿದೆ.

೨೦೦೨ರಿಂದ ಭಾರತದಲ್ಲಿ ಬಿಟಿ ಹತ್ತಿಯನ್ನು ಬೆಳೆಯಲು ಅನುಮತಿ ನೀಡಲಾಯಿತು. ಆದರೆ ಯಾವುದೇ ಮೇಲ್ಮೈ ನೀರಾವರಿ ವ್ಯವಸ್ಥೆ ಇಲ್ಲದ ಮತ್ತು ಸವಕಲಾದ ಮಣ್ಣಿರುವ ವಿದರ್ಭದಲ್ಲೂ ಈ ಬಿಟಿ ಹತ್ತಿಯನ್ನು ಬೆಳೆಯಲು ರೈತರು ಪ್ರಾರಂಭಿಸಿದರು. ಕಳೆದ ವರ್ಷ ಒಳ್ಳೆಯ ಬೆಲೆ ದೊರೆತದ್ದನ್ನು ನೋಡಿ ಈ ವರ್ಷ ವಿದರ್ಭದ ರೈತರು ೧೬ ರಿಂದ ೧೭ ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿಟಿ ಹತ್ತಿಯನ್ನು ಬಿತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿದರ್ಭವನ್ನೂ ಒಳಗೊಂಡಂತೆ ಭಾರತದ ಹಲವಾರು ಭಾಗಗಳಲ್ಲಿ ಕೀಟ ಮತ್ತು ಕ್ರಿಮಿಗಳ ಬಾಧೆ ಹೆಚ್ಚಿದೆ, ಹಾಗೂ ಹಸಿರು ಮತ್ತು ಗುಲಾಬಿ ಬೋಲ್ವರ್ಮ್ ಕೀಟಗಳು ಕೀಟನಾಶಕಗಳ ವಿರುದ್ಧ ಪ್ರತಿರೋಧ  ಶಕ್ತಿಯನ್ನು ಬೆಳೆಸಿಕೊಂಡಿವೆ. ಇದಲ್ಲದೆ ದ್ವಿತೀಯ ಹಂತದ ಕೀಟಗಳ ಧಾಳಿಯೂ ಹೆಚ್ಚಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಟಿ ಹತ್ತಿಯ ಸಾಮರ್ಥ್ಯವು ಕುಗ್ಗಿದ್ದು ಕೀಟಗಳು ಮತ್ತು ಗುಲಾಬಿ ಬೋಲ್ವರ್ಮ್‌ಗಳು ಬೋಲ್ಗಾರ್ಡ್-೨ನ್ನು ನಾಶಮಾಡಿವೆ. ಈ ಗುಲಾಬಿ ಬೋಲ್ವರ್ಮ್‌ಗಳು ೨೦೦೯ರಲ್ಲೇ ಬೋಲ್ಗಾರ್ಡ್ ೧ ಕ್ಕೆ ಪ್ರತಿರೋಧವನ್ನು ಬೆಳೆಸಿಕೊಂಡಿದ್ದವು. ೨೦೧೫ರಲ್ಲಿ ಗುಜರಾತಿನಲ್ಲಿ ಮತ್ತು ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಬೋಲ್ಗಾರ್‍ದ್೧ ರ ಬದಲಿಗೆ ಬೋಲ್ಗಾರ್‍ದ್ ೨ನ್ನು ಬಳಸಿದರೂ ಹಾನಿಯನ್ನು ತಡೆಗಟ್ಟಲಾಗಲಿಲ್ಲ. ೨೦೧೫-೧೬ರಲ್ಲಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಬಿಳಿಕೀಟಗಳ ದಾಳಿಯಿಂದಾಗಿ ಅಪಾರ ಬೆಳೆನಾಶ ಉಂಟಾಯಿತು. ಒಂದೆಡೆ ಬಿಟಿ ಹತ್ತಿಯ ಜೈವಿಕ ಸಾಮರ್ಥ್ಯ ಕುಗ್ಗಿದೆಯೆಂದು ಅನಧಿಕೃತವಾಗಿ ಒಪ್ಪಿಕೊಳ್ಳುತ್ತಿದ್ದರೂ ಸರ್ಕಾರವು ಈ ವಿಧದ ಬೀಜದ ಪೂರೈಕೆಯನ್ನು ತಡೆಗಟ್ಟಿ ಅದರ ಬದಲಾಗಿ ಬೇರೆ ಬೀಜವನ್ನು ಪೂರೈಸುವಂಥ ಯಾವುದೇ ಮಹತ್ವದ ಹೆಜ್ಜೆಯನ್ನಿಟ್ಟಿಲ್ಲ. ಅದರ ಬದಲಿಗೆ ಕೀಟಗಳನ್ನು ತಡೆಗಟ್ಟುವಂಥ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ರೈತರ ಮೇಲೆಯೇ ಗೂಬೆ ಕೂರಿಸಲಾಗುತ್ತಿದೆ. ಕಳೆದ ಜುಲೈ ತಿಂಗಳಲ್ಲಿ ಹತ್ತಿ ಬೆಳೆಗಳಿಗೆ ಏಕೆ ಅತಿ ಹೆಚ್ಚು ಕೀಟನಾಶಕವನ್ನು  ಸಿಂಪಡಿಸಲಾಯಿತೆಂಬುದರ ಹಿಂದಿನ ಕಾರಣಗಳನ್ನು ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆಯ (ಸಿಸಿಆರ್‌ಐ) ಅಧ್ಯಯನವೊಂದು ಬಯಲಿಗೆ ತಂದಿದೆ. ಹತ್ತಿ ಬೆಳೆಯನ್ನು ಡಿಸೆಂಬರ್‌ನಲ್ಲೇ ಕಟಾವು ಮಾಡಬೇಕಿದ್ದರೂ ಕಳೆದ ಹಲವಾರು ವರ್ಷಗಳಿಂದ ಹತ್ತಿ ಬೆಳೆಯನ್ನು ಮಾರ್ಚ್‌ವರೆಗೆ ಜಮೀನಿನಲ್ಲೇ ಉಳಿಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಹತ್ತಿಯ ಬೀಜ ಮತ್ತು ತುಪ್ಪಟವನ್ನು ನಾಶಗೊಳಿಸುವ ಗುಲಾಬಿ ಬೋಲ್ವರ್ಮ್‌ನ ಜೈವಿಕ ಚಕ್ರಕ್ಕೆ ಭಂಗ ಬರುತ್ತಿರಲಿಲ್ಲ. ಹೀಗಾಗಿ ಸಾಮಾನ್ಯವಾಗಿ ನವಂಬರ್ ಮಧ್ಯಭಾಗದಲ್ಲಿ ಕಂಡುಬರುವ ಈ ಕೀmವು, ಮುಂದಿನ ಬಿತ್ತನೆ ಋತುವಿನಲ್ಲಿ’ ಅದರಲ್ಲೂ ವಿಶೇಷವಾಗಿ ನೀರಾವರಿ ಪ್ರದೇಶಗಳಲ್ಲಿ ಇನ್ನೂ ಬೇಗನೆಯೇ ಕಾಣಿಸಿಕೊಂಡವು. ಇದರ ಜೊತೆಗೆ ಪೂರಕವಾದ ಹವಾಮಾನ ಮತ್ತು ಬೆಳವಣಿಗೆ ಪೂರಕ ಹಾರ್ಮೋನ್‌ಗಳ ಬಳಕೆಯಿಂದಾಗಿ ಹತ್ತಿ ಗಿಡಗಳಲ್ಲಿ ಸೊಂಪಾದ ಎಲೆಗುಚ್ಚಗಳು ಬೆಳೆದುಕೊಂಡವು. ಕಳೆದ ವರ್ಷದಿಂದ ಮೋನ್ಸಾಂಟೋ ಕಂಪನಿಯು ರೌಂಡಪ್ ರೆಡಿ ಫ್ಲೆಕ್ಸ್ (ಆರ್‌ಆರ್‌ಆರ್) ಎಂಬ ಸಸ್ಯನಾಶಕವನ್ನು ತಾಳಿಕೊಳ್ಳುವ ಹತ್ತಿ ವಿಧವೊಂದನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವುದು ಮತ್ತೊಂದು ಸಮಸ್ಯೆಯನ್ನು ಹುಟ್ಟಿಹಾಕಿದೆ. ಈ ನಕಲಿ ಬೀಜಗಳ ಪಾಕೆಟ್ಟಿನ ಮೇಲೆ ಉತ್ಪನ್ನದ ಹೆಸರಾಗಲೀ, ತಾಂತ್ರಿಕ ವಿವರಗಳಾಗಲೀ, ಅದು ಹೈಬ್ರೀಡ್ ಬೀಜವೋ ಅಥವಾ ಬಿಟಿ ಜೀನ್‌ಗಳನ್ನು ಹೊಂದಿದೆಯೋ ಎಂಬ ಮಾಹಿತಿಯಾಗಲೀ ಇರುವುದಿಲ್ಲ. ೨೦೦೧ರಲ್ಲಿ ಗುಜರಾತಿನಲ್ಲಿ ಸಹ ಹೀಗೆ ಆಗಿತ್ತು. ನವಭಾರತ್ ಬೀಜ ಕಂಪನಿ ಸರ್ಕಾರದಿಂದ ಪರವಾನಗಿ ಸಿಗುವ ಮುನ್ನವೇ ಬಿಟಿ ಹತ್ತಿಯನ್ನು ಕಾನೂನು ಬಾಹಿರವಾಗಿ ಮಾರಾಟವನ್ನು ಮಾಡಿತ್ತು. ಆಂಧ್ರಪ್ರದೇಶದಲ್ಲಿ ಬಿತ್ತಿದ ಹತ್ತಿ ಬೆಳೆಯಲ್ಲಿ ಶೇ. ೧೫ರಷ್ಟು ಈ ಆರ್‌ಆರ್‌ಎಫ್‌ನ ನಕಲೀ ಬೀಜಗಳಾಗಿದ್ದು ಅದರ ಅಧ್ಯಯನಕಾಗಿ ಆಂಧ್ರ ಸರ್ಕಾರ ಒಂದು ತನಿಖಾ ತಂಡವನ್ನು ರಚಿಸಿದೆ. ಈ ಆರ್‌ಆರ್‌ಎಫ್ ಅನ್ನು ಅಭಿವೃದ್ಧಿ ಪಡಿಸಿದ್ದ ಮಾನ್ಸಾಂಟೋ ಕಂಪನಿ ಜೆನಿಟಿಕ್ ಇಂಜನಿಯರಿಂಗ್ ಅಪ್ರೈಸಲ್ ಕಮಿಟಿಯಿಂದ ಪರವಾನಗಿ ಪಡೆದುಕೊಳ್ಳಲು ೨೦೦೭ರಲ್ಲಿ ಹಾಕಿಕೊಂಡಿದ್ದ ಅರ್ಜಿಯನ್ನು ಕಳೆದ ವರ್ಷ ಹಿಂಪಡೆದಿದೆ.

Dear Reader,

To continue reading, become a subscriber.

Explore our attractive subscription offers.

Click here

Or

To gain instant access to this article (download).

Pay INR 50.00

(Readers in India)

Pay $ 6.00

(Readers outside India)

Updated On : 13th Nov, 2017
Back to Top