ISSN (Print) - 0012-9976 | ISSN (Online) - 2349-8846

ಧರ್ಮದ ನಿರಾಕರಣೆ

ಧಾರ್ಮಿಕ ಸ್ವಾತಂತ್ರ್ಯವೆಂಬ ಮೂಲಭೂತ ಹಕ್ಕಿನ ಪರಿಧಿಯಲ್ಲಿ ಮಹಿಳೆಯ ಸ್ಥಾನಮಾನವೇನು?

 

ಪ್ರಚಲಿತದಲ್ಲಿರುವ ಧರ್ಮಗಳಲ್ಲಿನ ಹಲವಾರು ಆಚರಣೆಗಳು ಆ ಧರ್ಮವನ್ನು ಆಚರಿಸುವ ಮಹಿಳೆಯರನ್ನು ಅಸಮಾನವಾಗಿಯೂ ಮತ್ತು ತಾರತಮ್ಯದಿಂದಲೂ ಕಾಣುತ್ತವೆ. ಆದರೆ ಮತ್ತೊಂದು ಧರ್ಮೀಯನನ್ನು ಮದುವೆಯಾದ ಕಾರಣಕ್ಕೆ ಆ ಮಹಿಯು ಹಿಂದಿನಿಂದ ಆಚರಿಸುತ್ತಿದ್ದ ಧರ್ಮವನ್ನು ಅನುಸರಿಸುವ ಹಕ್ಕನ್ನು ಕಿತ್ತುಕೊಳ್ಳುವಂಥ ಮಹಿಳಾದ್ವೇಷೀ ಕ್ರಮವು ಮಹಿಳೆಗೆ ಸಮಾನತೆಯ ಹಕ್ಕನ್ನು ಮತ್ತು ಸ್ವಾಯತ್ತತೆಯನ್ನು ನೀಡುವ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದ ನಡೆಯೇ ಆಗಿರುತ್ತದೆ.

ಇಂಥ ಒಂದು ಪ್ರಕರಣವು ಗೂರ್ಲುಕ್ ಗುಪ್ತಾ ಎಂಬ ಪಾರ್ಸಿ ಮಹಿಳೆಯು ಒಬ್ಬ ಪಾರ್ಸಿಯಲ್ಲದ ಪುರುಷನನ್ನು ಮದುವೆಯಾದಾಗ ಸಂಭವಿಸಿದೆ. ಮದುವೆಯ ನಂತರವು ಪಾರ್ಸಿ ಶ್ರದ್ಧೆಯನ್ನು ಅನುಸರಿಸಲು ವಲ್ಸಾಡ್‌ನಲ್ಲಿರುವ ಧಾರ್ಮಿಕ ಸಂಸ್ಥೆಯು ಅಡ್ಡಿಪಡಿಸುತ್ತಿದೆಯೆಂದು ಆಕೆ ಗುಜರಾತಿನ ಹೈಕೋರ್ಟಿನಲ್ಲಿ ದಾವೆಯೊಂದನ್ನು ಸಲ್ಲಿಸಿದ್ದರು. ಅದನ್ನು ಗುಜರಾತಿನ ಹೈಕೋರ್ಟು ೨೦೧೨ರಲ್ಲಿ ವಜಾ ಮಾಡಿತು. ಆಕೆ  ೧೯೫೪ರ ವಿಶೇಷ ವಿವಾಹ ಕಾಯಿದೆಯಡಿ ಒಬ್ಬ ಪಾರ್ಸಿಯೇತರ ಪುರುಷನನ್ನು ಮದುವೆಯಾಗಿರುವುದರಿಂದ ಆಕೆಯು ತನ್ನ ಗಂಡನ ಧರ್ಮದವಳೇ ಆಗಿರುತ್ತಾಳೆಂದು ಭಾವಿಸಲಾಗುತ್ತದೆ ಮತ್ತು ಹಾಗೆಯೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನ್ಯಾಯಾಲಯವು ಈ ಆದೇಶದ ಮೂಲಕ ಭಾರತದ ಸಂವಿಧಾನವು ಖಾತರಿಗೊಳಿಸಿರುವ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನು ಆಕೆಗೆ ನಿರಾಕರಿಸಿತು.

To read the full text Login

Get instant access

New 3 Month Subscription
to Digital Archives at

₹826for India

$50for overseas users

Updated On : 13th Nov, 2017

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top