ISSN (Print) - 0012-9976 | ISSN (Online) - 2349-8846

ಚೀನಾದ ಜೊತೆಗಿನ ವೈಷಮ್ಯಕ್ಕೆ ತರ್ಕವೇನು?

ಅಮೆರಿಕವು ಬೆಂಬಲಕ್ಕೆ ಬರುವ ಯಾವ ಭರವಸೆಗಳು ಇಲ್ಲದಿರುವಾಗ ಮೋದಿಯವರು ಸದ್ದಿಲ್ಲದೆ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವರೇ?

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ದೋಕ್ಲಾಮ್ ಅಥವಾ ದೋಂಗ್ಲಾಮ್ ಪ್ರಸ್ಥಭೂಮಿ ಎಂದು ಕರೆಯಲಾಗುವ ಭಾರತ-ಚೀನಾ ಗಡಿಭಾಗದಲ್ಲಿ ಚೀನಾವು ತನ್ನ ಭಾಗದಲ್ಲಿ ಕೈಗೊಂಡಿರುವ ರಸ್ತೆ ನಿರ್ಮಾಣವನ್ನು ತಡೆಗಟ್ಟಲು, ಕಳೆದ ಜೂನ್ ೨೬ರಂದು,  ಭಾರತದ ಸೇನಾತುಕಡಿಗಳು ಸಿಕ್ಕಿಂ ವಿಭಾಗದಲ್ಲಿರುವ ಚೀನಾ ಗಡಿಯನ್ನು ದಾಟಿ ಮುನ್ನುಗ್ಗುತ್ತಿದ್ದ ಸಮಯದಲ್ಲೇ, ಭಾರತದ ಪ್ರಧಾನಿ ಮೋದಿಯವರು ಅಮೆರಿಕದ ವಾಷಿಂಗ್‌ಟನ್-ಡಿಸಿಯಲ್ಲಿ ಡೋನಾಲ್ಡ್ ಟ್ರಂಪ್ ಆಡಳಿತದ ಅಮೆರಿಕ ಫರ್ಸ್ಟ್ (ಅಮೆರಿಕವೇ ಮೊದಲು) ನೀತಿಯ ಬಗ್ಗೆ ಭಾರತಕ್ಕಿರುವ ಭಿನ್ನಾಭಿಪ್ರಾಯಗಳನ್ನು ಮರೆಮಾಚಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಮೋದಿ ಮತ್ತವರ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮಾತ್ರವಲ್ಲದೆ ಭಾರತದ ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳೂ ಸಹ ಭಾರತ ಮತ್ತು ಅಮೆರಿಕದ ವ್ಯೂಹಾತ್ಮಕ ಮೈತ್ರಿಯ ರೇಟಿಂಗ್ ಕೆಳಗಿಳಿಯಬಹುದಾದ ಸಾಧ್ಯತೆಯ ಬಗ್ಗೆ ಆತಂಕಗೊಂಡಿದ್ದವು. ಏಕೆಂದರೆ ಮಹಾನ್ ಶಕ್ತ ರಾಷ್ಟ್ರ (ಗ್ರೇಟ್ ಪವರ್) ವಾಗಬೇಕೆಂಬ ತನ್ನ ಮಹತ್ವಾಕಾಂಕ್ಷೆಗೆ ಅಮೆರಿಕದ ಜೊತೆ ಒಂದು ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವ ಅತ್ಯಗತ್ಯವೆಂದು ಭಾರತದ ಆಳುವವರ್ಗಗಳು ಭಾವಿಸುತ್ತಾರೆ. ಪ್ರಾಯಶಃ ಅಮೆರಿಕ ಸಾಮ್ರಾಜ್ಯಶಾಹಿಯ ಜೊತೆ ಒಂದು ಚೀನಾ ವಿರೋಧಿ ಮೈತ್ರಿಯನ್ನು ರೂಪಿಸಿಕೊಳ್ಳುವ ಸಲುವಾಗಿಯೇ ಪ್ರಧಾನಿಯವರ ಹಿಂದೂತ್ವವಾದಿ ಬಲಗೈ ಭಂಟರು ಚೀನಾದ ಜೊತೆ ಮೂರನೇ ಗಡಿವಿಭಾಗದಲ್ಲೂ ಸಂಘರ್ಷವೊಂದನ್ನು ಯೋಜಿಸಿದಂತೆ ಕಾಣುತ್ತಿದೆ. ಹಿಂದಿನಿಂದಲೂ ಭಾರತಕ್ಕೆ ಚೀನಾದ ಜೊತೆ ಈಶಾನ್ಯ ಗಡಿ ಪ್ರದೇಶದಲ್ಲಿ ಮ್ಯಾಕ್‌ಮೋಹನ್ ಗಡಿ ರೇಖೆಗೆ ಸಂಬಂಧಪಟ್ಟಂತೆಯೂ ಮತ್ತು ವಾಯುವ್ಯ ಗಡಿಯಲ್ಲಿ ಅಕ್ಸಾಯ್ ಚಿನ್ ಪ್ರದೇಶದ ಮೇಲೆ ಹಕ್ಕಿನ ಬಗ್ಗೆಯೂ ಗಡಿ ವಿವಾದ ಉಳಿದುಕೊಂಡು ಬಂದಿದೆ.  ಆದರೆ ಈ ತಂತ್ರಗಾರಿಕೆಯು ಫಲ ನೀಡುವುದೇ? 

೨೦೧೪ರಲ್ಲಿ ಮೋದಿ ಸರ್ಕಾರ ಅಧಿಕಾರವನ್ನು ಪಡೆದುಕೊಂಡಾಗಿನಿಂದಲೂ ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಒಲವುಗಳ ಸಂಪೂರ್ಣ ಬಳಕೆ ಮಾಡಿಕೊಂಡ ಅಮೆರಿಕದ ಬರಾಕ್ ಒಬಾಮಾ ಆಡಳಿತವು ತನ್ನ ಚೀನಾ ವಿರೋಧಿ ನೀತಿಯಲ್ಲಿ ಭಾರತವು ಮುಂಚೂಣಿ ಪಾತ್ರ ನಿರ್ವಹಿಸುವಂತೆ ಸಿದ್ಧಗೊಳಿಸುತ್ತಿದೆ.ಅದರಲ್ಲೂ ನಿರ್ದಿಷ್ಟವಾಗಿ ಅಮೆರಿಕವು ಭಾರತವನ್ನು ಒಂದು ಪ್ರಮುಖ ಸೇನಾ ಸಹಭಾಗಿ ಎಂದು ಪರಿಗಣಿಸಿದೆ. ಭಾರತವು ಅಮೆರಿಕದ ಜೊತೆ ಸೇನಾ ಸರಂಜಾಮು ವಿನಿಮಯ ಒಪ್ಪಂದವನ್ನು ಮಾಡಿಕೊಂಡಿದ್ದು ಅದರಡಿಯಲ್ಲಿ ಅಮೆರಿಕವು ತನ್ನ ಸೇನಾ ತುಕಡಿಗಳನ್ನು ಭಾರತೀಯ ಸೇನಾ ನೆಲೆಗಳಲ್ಲಿ ನಿಯೋಜಿಸಬಹುದು. ಇದಕ್ಕೆ ಪ್ರತಿಯಾಗಿ ಅಮೆರಿಕದಿಂದ ಅಮೆರಿಕದ ಅತ್ಯಂತ ಆಪ್ತ ಸಹಭಾಗಿಗಳು ಮತ್ತು ಮಿತ್ರರ ಜೊತೆ ಮಾತ್ರ ಹಂಚಿಕೊಳ್ಳುವ ಮಟ್ಟದ ಸೇನಾ ತಂತ್ರಜ್ನಾನದ ಸಹಕಾರವನ್ನು ಪಡೆದುಕೊಳ್ಳಲು ಭಾರತ ಅರ್ಹತೆಯನ್ನು ಪಡೆದುಕೊಂಡಿದೆ. ಇವೆಲ್ಲದರ ಮೂಲಕ  ಅಮೆರಿಕ ಭಾರತವನ್ನು ತನ್ನ ಜಾಗತಿಕ ವ್ಯೂಹದೊಳಗೆ ಸೆಳೆದುಕೊಂಡಿದೆ.

Dear Reader,

To continue reading, become a subscriber.

Explore our attractive subscription offers.

Click here

Or

To gain instant access to this article (download).

Pay INR 50.00

(Readers in India)

Pay $ 6.00

(Readers outside India)

Updated On : 13th Nov, 2017
Back to Top